ಈ ಹಿಂದೆ ಮಲಯಾಳಂ ಚಿತ್ರರಂಗದಲ್ಲಿ ಮೋಹನ್ ಲಾಲ್ ಅಭಿನಯದ ಭಗವಾನ್ ಹೆಸರಿನ ಚಿತ್ರವೊಂದನ್ನು 19ಗಂಟೆಯೊಳಗೆ ಚಿತ್ರೀಕರಿಸಲಾಗಿತ್ತು. ಇದೀಗ ಕನ್ನಡದಲ್ಲಿ ನಿರ್ಮಾಪಕ ಅಣಜಿ ನಾಗರಾಜ್ ಮತ್ತು ನಿರ್ದೇಶಕ ಪ್ರಶಾಂತ್ ಸೇರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಹಾಕಿಕೊಂಡು 18 ಗಂಟೆಗಳಲ್ಲಿ ಚಿತ್ರವೊಂದನ್ನು ಚಿತ್ರೀಕರಿಸಿದ್ದಾರೆ. ಅದೇ ಸುಗ್ರೀವ ಚಿತ್ರ.
MOKSHA
ಸುಗ್ರೀವ ಚಿತ್ರಕ್ಕೆ 10 ಕನ್ನಡದ ನಿರ್ದೇಶಕರು, 10 ಸಹಾಯಕ ನಿರ್ದೇಶಕರು, 10 ಕ್ಯಾಮರಾಮನ್ಗಳು, 45 ಕ್ಯಾಮರಾ ಸಹಾಯಕರು, 500 ಕೆಲಸಗಾರರು, 30 ನಟನಟಿಯರು, ಇಬ್ಬರು ನೃತ್ಯ ನಿರ್ದೇಶಕರು ಸುಗ್ರೀವ ಚಿತ್ರಕ್ಕೆ ಬೆವರು ಸುರಿಸಿದ್ದಾರೆ. ಚಿತ್ರದ ನಾಯಕಿಯಾಗಿ ಯಜ್ಞಾ ಶೆಟ್ಟಿ ನಟಿಸಿದ್ದಾರೆ. ಗುರುಕಿರಣ್ ಸಂಗೀತ, ರಾಮ್ ನಾರಾಯಣ್ ಸಂಭಾಷಣೆ ಈ ಚಿತ್ರಕ್ಕಿದೆ.
ಒಟ್ಟಾರೆ ಹಲವು ಮಂದಿಯ ಪರಿಶ್ರಮದಿಂದ ಈ ಚಿತ್ರ ತಯಾರಾಗಿದ್ದು ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದೆ. ಹಲವು ದಿನಗಳ ನಂತರ ನಗರದ ಕಪಾಲಿ ಚಿತ್ರಮಂದಿರದಲ್ಲಿ ಶಿವಣ್ಣನ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ನಮ್ಮ ಪ್ರೇಕ್ಷಕರು ಈ ಚಿತ್ರವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.