ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಒಂದೇ ದಿನ ನಾಲ್ಕು ಚಿತ್ರ; ಹೊಸಬರ-ಹಳಬರ ಅದೃಷ್ಟ ಪರೀಕ್ಷೆ (One Day | Kote | Suicide | Rangappa Hogbitna)
ವಾರಕ್ಕೆ ಒಂದೋ ಎರಡೋ ಕನ್ನಡ ಚಿತ್ರ ಬಿಡುಗಡೆಯಾಗುತ್ತಾ ಬಂದಿದ್ದರೆ, ಈ ವಾರ (ಫೆಬ್ರವರಿ 11) ಒಮ್ಮೆಲೆ ನಾಲ್ಕು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅವುಗಳ ಶೀರ್ಷಿಕೆಗಳಿವು- 'ಒನ್ ಡೇ', 'ಕೋಟೆ', 'ರಂಗಪ್ಪಾ ಹೋಗ್ಬಿಟ್ನಾ?' ಮತ್ತು 'ಸೂಸೈಡ್'.

ಒನ್ ಡೇ ಬರೇ ಹೊಸಬರ ಚಿತ್ರ. ಸಾಹಸ ನಿರ್ದೇಶಕ ಅಪ್ಪು ವೆಂಕಟೇಶ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗುತ್ತಿದ್ದಾರೆ. ನಿರ್ದೇಶಕ ನವೀನ್ ಮತ್ತು ನಿರ್ಮಾಪಕ ಕೃಷ್ಣಸ್ವಾಮಿಗೂ ಇದು ಮೊದಲ ಚಿತ್ರ. ವ್ಯಕ್ತಿಯೊಬ್ಬನ ಬದುಕಿನಲ್ಲಿ ಒಂದೇ ದಿನದಲ್ಲಿ ಏನೇನು ನಡೆಯುತ್ತದೆ ಎಂಬುದೇ ಕಥಾ ಹಂದರ. ಇದು ವಾಸ್ತವ ನೆಲೆಗಟ್ಟಿನಲ್ಲೇ ಕಥೆ ಹೇಳುವ ಚಿತ್ರ.

ಪ್ರಜ್ವಲ್ ದೇವರಾಜ್ ಅಭಿನಯದ 'ಕೋಟೆ' ಚಿತ್ರವನ್ನು ಜಾಕ್ ಮಂಜುನಾಥ್ ನಿರ್ಮಿಸಿದ್ದಾರೆ. ಶ್ರೀನಿವಾಸ್ ರಾಜು ನಿರ್ದೇಶಕರು. ಹುಬ್ಬಳ್ಳಿ ಕಡೆಯ ಭಾಷೆಯೇ ಚಿತ್ರದ ಹೈಲೈಟ್ ಅಂತೆ. ಮುಂಬೈ ಬೆಡಗಿ ಡಿಂಪಲ್ ಚೋಪ್ರಾ ನಾಯಕಿ.

'ರಂಗಪ್ಪ ಹೋಗ್ಬಿಟ್ನಾ?' ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಅಪ್ಪಟ ಮನರಂಜನೆಯ ಚಿತ್ರ. ರಮೇಶ್ ಅರವಿಂದ್ ಅಭಿನಯದ ಈ ಚಿತ್ರದಲ್ಲಿ ಗ್ಲಾಮರ್ ಬೆಡಗಿ ಸಂಜನಾ ನಾಯಕಿ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನ ಇವಿಷ್ಟೂ ಪ್ರಸನ್ನ ಅವರದು. ಕಿಂಗ್ ರವಿ ನಿರ್ಮಾಪಕರು.

ಸಾವು-ನೋವು ಕುರಿತು ಹೆಣೆದ ಕಥೆಯನ್ನು ಹೊಂದಿರುವ 'ಸೂಸೈಡ್'. 'ಎಚ್ಚರಿಕೆ; ಈ ಚಿತ್ರ ಟೈಮ್‌ಪಾಸ್‌ಗಲ್ಲ' ಎಂಬ ಅಡಿ ಬರಹವನ್ನು ಹೊಂದಿರುವ ಚಿತ್ರದಲ್ಲಿ ಋತ್ವಿಕ್ ಮತ್ತು ಕಲ್ಯಾಣಿ ನಾಯಕ-ನಾಯಕಿಯರು. ಸುಚೇಂದ್ರ ಪ್ರಸಾದ್‌ರದ್ದೂ ಪ್ರಮುಖ ಪಾತ್ರ. ನಿರ್ದೇಶನ ಮತ್ತು ನಿರ್ಮಾಣ ಪ್ರಸಾದ್ ಬಾಬು. ಆತ್ಮಹತ್ಯೆ ಹಿಂದಿನ ನೋವುಗಳನ್ನು ಬಿಂಬಿಸುವ ಚಿತ್ರ ಇದು.
ಇವನ್ನೂ ಓದಿ