ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಈಡಿಯೆಟ್ ವೀರಬಾಹು ಹೆಂಡ್ತೀರು ಮಾತ್ರ ಇಂದು ಬಿಡುಗಡೆ (Veerabahu | 5 Idiots | Naavu Namma hendatiyaru | Kannada film release)
ಕನ್ನಡ ಚಿತ್ರರಂಗ ಸದ್ಯ ಸಂಕಷ್ಟದ ಸುಳಿಯಲ್ಲಿರುವುದು ಹದಿನಾರಾಣೆ ಸತ್ಯ. ವಾರಕ್ಕೆ ಮೂರು, ನಾಲ್ಕು, ಐದು ಚಿತ್ರಗಳು ತೆರೆ ಕಂಡು ಬಹುತೇಕ ನಿರ್ಮಾಪಕರು ಬೀದಿಗೆ ಬರುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಆದರೆ ಈ ವಾರ ಇಂತಹ ಪ್ರಕ್ರಿಯೆಗೆ ಕೊಂಚ ನಿರ್ಬಂಧ ವಿಧಿಸಲಾಗಿದೆ. ಐದರ ಬದಲು, ಮೂರು ಚಿತ್ರಗಳ ಬಿಡುಗಡೆಗೆ ಮಾತ್ರ ಅವಕಾಶ ನೀಡಲಾಗಿದೆ.

ಕಳೆದ ವಾರವಷ್ಟೇ ನಾಲ್ಕು ಚಿತ್ರಗಳು ತೆರೆಗೆ ಅಪ್ಪಳಿಸಿದ್ದುವು. ರಂಗಪ್ಪಾ ಹೋಗ್ಬೀಟ್ನಾ?, ವನ್ ಡೇ, ಕೋಟೆ, ಮತ್ತು ಸೂಸೈಡ್ - ಇವು ಕಳೆದ ವಾರ (ಫೆ.11) ಬಿಡುಗಡೆಯಾದ ಚಿತ್ರಗಳು. ಈ ಪೈಕಿ ಕೋಟೆ ಕೊಂಚ ಸದ್ದು ಮಾಡಿದ್ದನ್ನು ಬಿಟ್ಟರೆ ಉಳಿದ ಮೂರೂ ಚಿತ್ರಗಳು ಮಕಾಡೆ ಮಲಗಿವೆ.

ಈ ವಾರ (ಫೆ.18) ಮತ್ತೆ ಐದು ಕನ್ನಡ ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಜ್ಜಾಗಿದ್ದವು. ಐದು ಚಿತ್ರಗಳೂ ಬಿಡುಗಡೆಗೊಂಡರೆ ನಿರ್ಮಾಪಕರು ಕೈಸಸುಟ್ಟುಕೊಳ್ಳುವುದು ಖಚಿತವಿತ್ತು. ಇದನ್ನು ಮನಗಂಡೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೇವಲ ಮೂರು ಚಿತ್ರಗಳಿಗಷ್ಟೇ ಬಿಡುಗಡೆಯ ಭಾಗ್ಯ ಕರುಣಿಸಿದೆ.

ಸಂಜೀವ್ ಕುಮಾರ್ ನಿರ್ಮಾಣ-ನಿರ್ದೇಶನದ 'ಆಪ್ತ', ಪದ್ಮನಾಭ್ ನಿರ್ದೇಶನದ 'ಟೇಕ್ ಇಟ್ ಈಸಿ', ಆನಂದ್ ಚೊಚ್ಚಲ ನಿರ್ದೇಶನದ '5 ಈಡಿಯಟ್ಸ್', ಸೀತಾರಾಮ್ ಕಾರಂತ್ ನಿರ್ದೇಶನದ 'ನಾವು ನಮ್ಮ ಹೆಂಡತಿಯರು' ಮತ್ತು ಮಹೇಂದರ್ ನಿರ್ದೇಶನದ 'ವೀರಬಾಹು' ಚಿತ್ರಗಳು ಬಿಡುಗಡೆಯಾಗಲಿವೆ ಎಂದು ಹೇಳಲಾಗಿತ್ತು.

ಅವುಗಳಲ್ಲೀಗ 'ಆಪ್ತ' ಮತ್ತು 'ಟೇಕ್ ಇಟ್ ಈಸಿ' ಬಿಡುಗಡೆ ಒಂದು ವಾರ ಮುಂದಕ್ಕೆ ಹೋಗಿವೆ. ಫೆ.25 ಬಿಡುಗಡೆ ಎಂದು ಘೋಷಿಸಿಕೊಂಡಿದ್ದ 'ಕಾರ್ತಿಕ್' ಚಿತ್ರವೂ ವಾಣಿಜ್ಯ ಮಂಡಳಿ ಸೂಚನೆ ಮೇರೆಗೆ ಮುಂದೂಡಲ್ಪಟ್ಟದೆ.

ಅನೇಕ ಚಿತ್ರಗಳು ಒಟ್ಟಿಗೆ ಒಂದೇ ದಿನ ತೆರೆ ಕಾಣುವುದರಿಂದ ಚಿತ್ರಮಂದಿರಗಳ ಸಮಸ್ಯೆ ಒಂದೆಡೆಯಾದರೆ ಕನ್ನಡ ಚಿತ್ರಗಳಿಗೆ ವಿಸ್ತ್ಕತ ಮಾರುಕಟ್ಟೆ ಇಲ್ಲದಿರುವುದು ಮತ್ತೊಂದು ಸಮಸ್ಯೆ. ಇವೆರಡೂ ಎದುರಾಗಿ ಚಿತ್ರಗಳು ಹೇಳ ಹೆಸರಿಲ್ಲದಂತೆ ಹಳ್ಳ ಹಿಡಿಯುತ್ತವೆ. ಇದನ್ನು ಗ್ರಹಿಸಿಯೇ ವಾಣಿಜ್ಯ ಮಂಡಳಿ ಮಧ್ಯ ಪ್ರವೇಶಿಸಿ, ಬರೇ ಮೂರು ಚಿತ್ರಗಳು ತೆರೆ ಕಾಣುವಂತೆ ಮಾಡಿದ್ದು ಸ್ವಾಗತಾರ್ಹ ಬೆಳವಣಿಗೆ.

ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ವಿವರ:

1.
ಚಿತ್ರ: ವೀರಬಾಹು
ತಾರಾಗಣ: ದುನಿಯಾ ವಿಜಯ್, ನಿಧಿ ಸುಬ್ಬಯ್ಯ
ನಿರ್ದೇಶನ: ಎಸ್. ಮಹೇಂದರ್
ಸಂಗೀತ: ವಿ. ಹರಿಕೃಷ್ಣ

2.
ಚಿತ್ರ: 5 ಈಡಿಯಟ್ಸ್
ತಾರಾಗಣ: ಮಾಸ್ಟರ್ ಆನಂದ್, ಅನಿರುದ್ಧ್, ನವೀನ್ ಕೃಷ್ಣ
ನಿರ್ದೇಶನ: ಮಾಸ್ಟರ್ ಆನಂದ್.
ಸಂಗೀತ: ಡ್ರಮ್ಸ್ ದೇವಾ

3.
ಚಿತ್ರ: ನಾವು ನಮ್ಮ ಹೆಂಡತಿಯರು
ತಾರಾಗಣ: ಹರೀಶ್ ರಾಜ್, ಅಶ್ವಿನಿ, ನೇತ್ರಾ ಶೆಟ್ಟಿ
ನಿರ್ದೇಶನ: ಸೀತಾರಾಮ್ ಕಾರಂತ್
ಇವನ್ನೂ ಓದಿ