ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಬೋರು ಹೊಡೆಸುವ 'ಆಪ್ತ' ಅಷ್ಟಕಷ್ಟೆ (Aptha | Sanjeev kumar | Neeraj Sham | Pooja Gandhi)
WD
ಚಿತ್ರದ ಪ್ರಥಮಾರ್ಧ ಮಂದಗತಿಯಲ್ಲೇ ಸಾಗಿ ದ್ವಿತೀಯಾರ್ಧದಲ್ಲಿ ಕೊಂಚ ಲವಲವಿಕೆ ಕಂಡುಬಂದರೂ, ನಿರೂಪಣೆಯಲ್ಲಿ ಸೊರಗಿರುವುದರಿಂದ 'ಆಪ್ತ' ಚಿತ್ರ ಪ್ರೇಕ್ಷಕರಿಗೆ ಬೋರ್ ಹೊಡೆಸುವುದು ಖಾತ್ರಿ.

ನಿರ್ದೇಶಕ ಸಂಜೀವ್ ಕುಮಾರ್ ಮೆಗೋಟಿ ನಿರೂಪಣೆಯಲ್ಲಿ ಎಡವಿರುವುದರಿಂದ ಚಿತ್ರವು ಪ್ರೇಕ್ಷಕರನ್ನು ಕೊನೆಯ ತನಕ ಹಿಡಿದಿಡುವಲ್ಲಿ ವಿಫಲವಾಗುತ್ತದೆ.

ವೈದ್ಯೆಯಾಗುವ ಆಸೆಯಿಂದ ನಗರಕ್ಕೆ ಬಂದ ಗ್ರಾಮೀಣ ಪ್ರದೇಶದ ಪ್ರತಿಭಾವಂತ ತರುಣಿ ಸಹಪಾಠಿಗಳ ರ‌್ಯಾಗಿಂಗ್‌ಗೆ ಸಿಲುಕಿ ಸಾಯುತ್ತಾಳೆ. ಈ ಸಾವಿನ ಪ್ರತೀಕಾರವನ್ನು ನಾಯಕ ತೀರಿಸುವುದು ಮಾತ್ರವಲ್ಲದೆ ಆತನೂ ಸಾಯುವುದು 'ಆಪ್ತ' ಚಿತ್ರದ ಕಥೆ.

ವೈದ್ಯ ವಿದ್ಯಾರ್ಥಿಗಳಾದ ಮಾನಸಿ, ಪೂನಂ, ಪ್ರಜ್ಞಾ, ಭವ್ಯಕಲಾ ಒಬ್ಬರ ಹಿಂದೆ ಒಬ್ಬರಂತೆ ಸರಣಿ ಕೊಲೆಗೀಡಾಗುತ್ತಾರೆ. ಈ ಚಿತ್ರದ ಮೂಲಕ ನಿರ್ದೇಶಕರು ಪ್ರೇಕ್ಷಕನಿಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆಂಬುದು ಕೊನೆಗೂ ರಹಸ್ಯವಾಗಿಯೇ ಉಳಿಯುತ್ತದೆ.

ನಟಿಯರಾದ ಪೂಜಾ ಗಾಂಧಿ, ಪೂನಂ, ಮಾನಸಿ, ಭವ್ಯಕಲಾ, ಪ್ರಜ್ಞಾ ಹೇಳಿದ್ದನ್ನು ಮಾಡಿ ಮುಗಿಸಿದ್ದಾರೆ. ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಹಾಸ್ಯದಲ್ಲಿ ಹೊಸತನವೇನೂ ಇಲ್ಲ. ನಾಯಕನ ಪಾತ್ರದಲ್ಲಿ ನೀರಜ್ ಶ್ಯಾಮ್ ಪೇಲವವಾಗಿ ಕಾಣುತ್ತಾರೆ.

ಮನರಂಜನೆ ಎಂಬುದು ಚಿತ್ರದ ಯಾವ ಹಂತದಲ್ಲೂ ಪ್ರೇಕ್ಷಕನ ಅನುಭವಕ್ಕೆ ಬರುವುದಿಲ್ಲವಾದುದರಿಂದ ಆತ ನಿರಾಶನಾಗುವುದು ಗ್ಯಾರಂಟಿ. ಚಿತ್ರ ಅನೇಕ ವಿಚಾರಗಳನ್ನು ಒಳಗೊಂಡಿದೆಯಾದರೂ ಅವುಗಳನ್ನು ಅಚ್ಚುಕಟ್ಟಾಗಿ ನಿರೂಪಿಸುವುದು ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಚಿತ್ರ ಪ್ರೇಕ್ಷಕನಿಗೆ 'ಆಪ್ತ' ಆಪ್ತವೆನಿಸದು.
ಇವನ್ನೂ ಓದಿ