ಜೆ.ಡಿ.ಕ್ರಿಯೇಶನ್ಸ್ ಅವರ 'ಗಲ್ಲ' ಚಿತ್ರಕ್ಕೆ ಮಾರ್ಚ್ 18ರಂದು ಚಾಲನೆ ದೊರಕಲಿದೆ. 'ಪಕ್ಕಾ ಲೋಕಲ್ ಸ್ವಲ್ಪ ಪಾಗಲ್' ಎಂಬ ಅಡಿಬರಹ ಇರುವ ಈ ಚಿತ್ರಕ್ಕೆ ಏಪ್ರಿಲ್ ಮೊದಲ ವಾರದಿಂದ ಮಂಡ್ಯ, ಕೇರಳ, ಬೆಂಗಳೂರು, ಕುಲು, ಮನಾಲಿ, ಹೈದರಾಬಾದ್ ಮುಂತಾದ ಕಡೆಗಳಲ್ಲಿ ಸತತ 60 ದಿನಗಳ ಚಿತ್ರೀಕರಣ ನಡೆಯಲಿದೆ.
ಪುಣೆ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ಅಭಿನಯ ಹಾಗೂ ನಿರ್ದೇಶನದಲ್ಲಿ ತರಬೇತಿ ಪಡೆದಿರುವ ಜಯಂತ್ ಈ ಚಿತ್ರದ ನಾಯಕ ಹಾಗೂ ನಿರ್ದೇಶಕ. ಶ್ವೇತಾ 'ಗಲ್ಲ'ದ ನಾಯಕಿ. ಸುಹಾಸಿನಿ, ತಾರಾ, ರಂಗಾಯಣ ರಘು, ರವಿಶಂಕರ್, ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.
ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಪಿ.ಎಲ್.ರವಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಅನಿಲ್ ಕುಮಾರ್ ಸಂಭಾಷಣೆ, ಮೋಹನ್ ಬಿ.ಕೆರೆ ಕಲಾ ನಿರ್ದೇಶನ ಹಾಗೂ ಕಲೈ ಅವರ ನೃತ್ಯ ನಿರ್ದೇಶನ 'ಗಲ್ಲ' ಚಿತ್ರಕ್ಕಿದೆ.