ಜಿ.ಎಸ್.ಬಿ. ಮೂವೀಸ್ ಲಾಂಛನದಲ್ಲಿ ಬಸವರಾಜು ನಿರ್ಮಿಸುತ್ತಿರುವ 'ನೆನೆಯುವೆ ನಿನ್ನ' ಚಿತ್ರಕ್ಕೆ ಇತ್ತೀಚೆಗೆ ಬಾಲಾಜಿ ಡಿಜಿ ಸ್ಟುಡಿಯೋದಲ್ಲಿ ಡಿ.ಟಿ.ಎಸ್. ಕಾರ್ಯ ಮುಗಿದಿದ್ದು ಚಿತ್ರವನ್ನು ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಎಸ್.ಉಮೇಶ್ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ರೇಣುಕುಮಾರ್ ಛಾಯಾಗ್ರಹಣ, ಸಿ.ಆರ್.ಬಾಬ್ಬಿ ಸಂಗೀತ, ಹಂಸರಾಜ್ ಸಂಭಾಷಣೆ, ಥ್ರಿಲ್ಲರ್ ಮಂಜು ಸಾಹಸ, ತ್ರಿಭುವನ್ ನೃತ್ಯ ನಿರ್ದೇಶನ, ಈಶ್ವರ್ ಸಂಕಲನ, ಎಂ.ಡಿ. ಹಾಷಂ, ನವೀನ್ ಮತ್ತು ಬಸವರಾಜು ಅವರ ಸಾಹಿತ್ಯವಿದೆ.