ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ವಿವಾದಗಳನ್ನೆಲ್ಲ ರಾಜಿ ಮಾಡಿಕೊಂಡು ಈ ವಾರ ತೆರೆಗೆ ಬರುತ್ತಿದೆ 'ನೀ ಇಲ್ಲದೆ' (Nee Illade, Pooja Gandhi, Raghu Mukharji, Shiva Ganapathy, Chennupaati Nagamalleshwari)
PR
PR
ಸಂಭಾವನೆ ಬಾಕಿ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ವಿವಾದದಿಂದ ಹೆಸರು ಮಾಡಿದ್ದ 'ನೀ ಇಲ್ಲದೆ' ಈ ಚಿತ್ರ ಈ ಕಾರಣದಿಂದಲೇ ಬಿಡುಗಡೆಗೆ ತಡವಾಗಿತ್ತು. ಎಲ್ಲಾ ವಿವಾದಗಳಿಗೂ ತೆರೆ ಎಳೆಯಲು ಒಂದೇ ದಿನ ಕಾಲ ಕೂಡಿ ಬಂದಿದ್ದರಿಂದ 'ನೀ ಇಲ್ಲದೆ' ಬಿಡುಗಡೆಗೆ ಸನ್ನಿಹಿತವಾಗಿದೆ.

ಏಕರುದ್ರಾದೇವಿ ಫಿಲಂಸ್ ಲಾಂಛನದಲ್ಲಿ ಚೆನ್ನುಪಾಟಿ ನಾಗಮಲ್ಲೇಶ್ವರಿ ನಿರ್ಮಿಸಿರುವ 'ಅನು' ಚಿತ್ರದ ನಂತರ ಶಿವಗಣಪತಿ ನಿರ್ದೇಶಿಸಿರುವ 'ನೀ ಇಲ್ಲದೆ' ಈ ವಾರ ರಜತ ಪರದೆಯ ಮೇಲೆ ರಾರಾಜಿಸಲಿದೆ.

ಸಾಮಾನ್ಯವಾಗಿ ಪ್ರೇಮಿಗಳು 'ನೀ ಇಲ್ಲದೆ' ಎಂದು ಹೇಳುವುದನ್ನು ಕೇಳಿದ್ದೇವೆ. ಇದೇ ಶೀರ್ಷಿಕೆಯ ಈ ಚಿತ್ರದಲ್ಲಿ ಯಾರು ಯಾರಿಗೆ 'ನೀ ಇಲ್ಲದೆ' ಎಂದು ಹೇಳುತ್ತಾರೆನ್ನುವುದು ಕುತೂಹಲಕಾರಿ ಸಂಗತಿ.

'ನೀ ಇಲ್ಲದೆ' ಚಿತ್ರಕ್ಕೆ ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ಬಾಲಾಜಿ ಧ್ವನಿ ಗ್ರಹಣ ಕೇಂದ್ರದಲ್ಲಿ ಡಬ್ಬಿಂಗ್ ಹಾಗೂ ರೀರೆಕಾರ್ಡಿಂಗ್ ಕಾರ್ಯ ನಡೆದಿತ್ತು.

ಹಳ್ಳಿ ಹುಡುಗಿಯಾದ ಪೂಜಾ ಗಾಂಧಿ ಸಂಗೀತ ಕಲಿತು ಏನಾದರೂ ಮಾಡಲೆಂದು ಪಟ್ಟಣಕ್ಕೆ ಬರುತ್ತಾಳೆ. ಆಗ ಸಂಗೀತದ ಟೀಚರ್ ರಘು ಮುಖರ್ಜಿ ಆಕೆಯ ಜೀವನದಲ್ಲಿ ಯಾವ ರೀತಿ ಬದಲಾವಣೆಗೆ ಕಾರಣವಾಗುತ್ತಾನೆ ಎಂಬುದು ಚಿತ್ರದ ಕಥಾ ಹಂದರ.

ಅನಿರೀಕ್ಷಿತ ಘಟನೆಗಳ ಜೊತೆಗೆ ಚಿತ್ರದಲ್ಲಿ ಸಸ್ಪೆನ್ಸ್ ಕೂಡಾ ಇದೆ. ಪೂಜಾ ಗಾಂಧಿ, ರಘು ಮುಖರ್ಜಿ, ಅನಂತ ವೇಲು, ಜಯಲಕ್ಷ್ಮಿ, ಬುಲೆಟ್ ಪ್ರಕಾಶ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸುರೇಂದ್ರ ರೆಡ್ಡಿ ಛಾಯಾಗ್ರಹಣ, ಅಸ್ಲೇ ಅಭಿಲಾಶ್ರ ಸಂಗೀತ, ಕೆಂಪರಾಜ್‌ ಸಂಕಲನ, ಗಜೇಂದ್ರ ಕುಮಾರ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ.
ಇವನ್ನೂ ಓದಿ