ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಮುರಳಿಯ ಕೆರೀರ್ ಗ್ರಾಫ್‌ ಏರಿಸಲಿದೆಯೇ 'ಹರೇ ರಾಮ ಹರೇ ಕೃಷ್ಣ' (Hare Rama Hare Krishna | Murali | Ilayaraja | Hamsalekha)
EVENT
ಶುಕ್ರವಾರ ಬಿಡುಗಡೆಯಾಗಲಿರುವ 'ಹರೇ ರಾಮ ಹರೇ ಕೃಷ್ಣ' ಹಲವಾರು ಕಾರಣಗಳಿಂದಾಗಿ ನಿರೀಕ್ಷೆ ಹುಟ್ಟಿಸಿದೆ. ಮೊದಲನೆಯದಾಗಿ ಸ್ಟುಡಿಯೋ ಮ‌ೂಲಗಳು ಹೇಳುವ ಪ್ರಕಾರ ಇದು ನಾಯಕ ನಟ ಮುರಳಿಯವರ ವೃತ್ತಿಜೀವನವನ್ನು ಏರುಮುಖವಾಗಿಸಲಿದೆಯಂತೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

'ಚಂದ್ರಚಕೋರಿ', 'ಯಶವಂತ್‌', 'ಕಂಠಿ' ಮೊದಲಾದ ಯಶಸ್ವೀ ಚಿತ್ರಗಳನ್ನು ನೀಡಿದ್ದ ಮುರಳಿ ನಂತರ ಅದೇಕೋ ಏನೋ ಮಸುಕಾಗತೊಡಗಿದರು. ಇವರ ಅಭಿನಯದಲ್ಲಿ ತೆರೆಕಂಡ 'ಮಿಂಚಿನ ಓಟ' (ಇದರಲ್ಲಿ ವಿಜಯ ರಾಘವೇಂದ್ರ ಕೂಡಾ ನಟಿಸಿದ್ದರು) ಮತ್ತು 'ಶ್ರೀಹರಿಕಥೆ' ಚಿತ್ರಗಳು ವಿಫಲಗೊಂಡಿದ್ದ ಹಿನ್ನೆಲೆಯಲ್ಲಿ ಅವರ ವೃತ್ತಿಜೀವನಕ್ಕೆ ಇಂಬುಕೊಡುವ ಚಿತ್ರವೊಂದು ಅಗತ್ಯವಾಗಿತ್ತು. ಚಿತ್ರತಂಡ ಮತ್ತು ಸ್ಟುಡಿಯೋ ಮ‌ೂಲಗಳ ಅಭಿಪ್ರಾಯವನ್ನೇ ಪರಿಗಣಿಸುವುದಾದರೆ ಚಿತ್ರದಲ್ಲಿ ಅಂಥಾದ್ದೊಂದು ಫೋರ್ಸ್‌ ಇದೆಯಂತೆ.

'ಗೌರಿ ಗಣೇಶ' ಚಿತ್ರದ ಪರಾಕಾಷ್ಠೆಯ ಸನ್ನಿವೇಶದಲ್ಲಿ 'ಎಲ್ಲಿಯವರೆಗೂ ಮೋಸ ಹೋಗೋ ಜನ ಇರ್ತಾರೋ ಅಲ್ಲಿಯವರೆಗೂ ಮೋಸ ಮಾಡೋ ಜನ ಇದ್ದೇ ಇರ್ತಾರೆ' ಎಂಬ ಡೈಲಾಗ್‌ ಅನಂತ್‌ನಾಗ್‌ರವರ ಬಾಯಿಂದ ಉದುರುತ್ತದೆ. ಈ ಸಾಲುಗಳನ್ನು ಚಿತ್ರದ ಪ್ರಚಾರ ಸಾಮಗ್ರಿಗಳಲ್ಲಿ ಬಳಸಿಕೊಳ್ಳಲಾಗಿದ್ದು, ಚಿತ್ರದ ಕಥೆಯ ಕುರಿತು ಚಿತ್ರರಸಿಕರು ಆಸಕ್ತಿ ತಳೆಯುವುದಕ್ಕೆ ಅದು ಕಾರಣವಾಗಿದೆ.

ಎಲ್ಲಕ್ಕಿಂತ ಕುತೂಹಲಕರ ಸಂಗತಿಯೆಂದರೆ ಈ ಚಿತ್ರಕ್ಕೆ ಇಳಯರಾಜಾರವರು ಸಂಗೀತ ನೀಡಿರುವುದು. 'ನೀ ನನ್ನ ಗೆಲ್ಲಲಾರೆ', 'ಗೀತಾ', 'ಜನ್ಮ ಜನ್ಮದ ಅನುಬಂಧ', 'ನಮ್ಮೂರ ಮಂದಾರ ಹೂವೇ', 'ಗುಲಾಬಿ', 'ಪ್ರೇಮ್‌ಕಹಾನಿ' ಮೊದಲಾದ ಚಿತ್ರಗಳ ಇಂಪಾದ ಗೀತೆಗಳಿಂದ ಜನಮನವನ್ನು ಸೂರೆಗೊಂಡಿರುವ ಇಳಯರಾಜಾರವರು ಈ ಚಿತ್ರದಲ್ಲಿ ಅದ್ಭುತವಾದ ಟ್ಯೂನುಗಳನ್ನು ನೀಡಿದ್ದಾರಂತೆ. ಇವಕ್ಕೆ ಹಂಸಲೇಖಾರವರು ಹಾಡುಗಳನ್ನು ಬರೆದಿರುವುದರಿಂದ ನಿರೀಕ್ಷೆಯು ಹೆಚ್ಚಲು ಕಾರಣವಾಗಿದೆ.

ಸಿ.ವಿ.ಅಶೋಕ್‌ ಕುಮಾರ್‌ರವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಛಾಯಾಗ್ರಾಹಕರು ಪಿ.ಕೆ.ಎಚ್‌.ದಾಸ್‌. ಶಶಿಕುಮಾರ್‌ರವರ ಸಂಕಲನ ಚಿತ್ರಕ್ಕಿದೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ