ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಎಲ್ಲೆಲ್ಲೂ 'ಜೋಗಯ್ಯ'ನದೇ ಹವಾ...!! (Jogayya | Prem | Shivaraj Kumar | Rakshitha)
EVENT
ಅದೇನು ನಿರ್ದೇಶಕ ಪ್ರೇಮ್‌ ಚಿತ್ರಗಳಿಗೆ ಮಾತ್ರವೇ ಈ ಮಟ್ಟದ ಪಬ್ಲಿಸಿಟಿ ಹುಟ್ಟಿಕೊಳ್ಳುತ್ತದೆಯೋ ಅಥವಾ ಅದೇನು ಕಾರಣವೋ ಗೊತ್ತಿಲ್ಲ. ಚಿತ್ರವೊಂದು ಯಶಸ್ಸು ಕಾಣಲಿ ಅಥವಾ ವಿಫಲವಾಗಲಿ, ಚಿತ್ರಕ್ಕೆ ಬೇಕಾದ ಪ್ರಚಾರವನ್ನು ಪಡೆಯುವಲ್ಲಿ ಪ್ರೇಮ್‌ ಮೊದಲಿಗರು ಎಂಬ ಮಾತು ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ. 'ಜೋಗಯ್ಯ' ಕೂಡಾ ಇದಕ್ಕೆ ಹೊರತಾಗಿಲ್ಲ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಾಡಿದ್ದು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಈಗಾಗಲೇ ಅದೆಂಥಾ ಸಂಚಲನೆ ಸೃಷ್ಟಿಯಾಗಿದೆಯೆಂದರೆ, ಹೆಚ್ಚೂಕಮ್ಮಿ ಇನ್ನೊಂದೆರಡು ಮೂರು ವಾರ ಬೇರಾವ ಚಿತ್ರಗಳೂ ಬಿಡುಗಡೆಯ ಕುರಿತು ಉಸಿರೆತ್ತುವಂತಿಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಇದು ಶಿವಣ್ಣನ ನೂರನೇ ಚಿತ್ರವಾಗಿರುವುದು, ಚಿತ್ರದಲ್ಲಿ 3ಡಿ ಪರಿಣಾಮವನ್ನು ಸಮರ್ಥವಾಗಿ ಬಳಸಿಕೊಂಡಿರುವುದು, ಉಪೇಂದ್ರ ಈ ಚಿತ್ರಕ್ಕಾಗಿ 'ತಗ್ಲಾಕ್ಕೊಂಡೆ ತಗ್ಲಾಕ್ಕೊಂಡೆ' ಎಂಬ ಹಾಡನ್ನು ಹಾಡಿರುವುದು, ಹರಿಕೃಷ್ಣರ ಫುಟ್‌ಟ್ಯಾಪಿಂಗ್‌ ಸಂಗೀತ, ಏಕಕಾಲದಲ್ಲಿ 250 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು, ಚಿತ್ರದ ಒಂದಷ್ಟು ಪ್ರದರ್ಶನಗಳ ಟಿಕೆಟ್ಟುಗಳು ಈಗಾಗಲೇ ಮಾರಾಟವಾಗಿರುವುದು.... ಒಂದೇ ಎರಡೇ...?!!

ಅಭಿಮಾನಿಗಳ ನೂಕುನುಗ್ಗಲಿನಿಂದ ಉಂಟಾಗುವ ದಟ್ಟಣೆಯನ್ನು ತಪ್ಪಿಸುವ ಸಲುವಾಗಿಯೇ ಕೆಂಪೇಗೌಡ ರಸ್ತೆಯ ಕಪಾಲಿ ಮತ್ತು ಸಂತೋಷ್‌ ಚಿತ್ರಮಂದಿರಗಳಲ್ಲಿ 'ಜೋಗಯ್ಯ' ಬಿಡುಗಡೆಯಾಗಲಿದ್ದಾನೆ ಎಂಬುದು ಚಿತ್ರದ ಪ್ರತಿಷ್ಠೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಈಗಾಗಲೇ ವಿತರಣೆಯಾಗಿರುವ ವಲಯಗಳೆಲ್ಲಕ್ಕೂ ದಾಖಲೆ ಬೆಲೆಗೆ ಚಿತ್ರವು ಮಾರಾಟವಾಗಿರುವುದರಿಂದ, ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್‌ ಮೊದಲೆರಡು ವಾರಗಳಲ್ಲೇ ಬಂಪರ್ ಗಳಿಕೆಯನ್ನು ನಿರೀಕ್ಷಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಗಾಂಧಿನಗರದ ಪಂಡಿತರು.

ಒಂದು ವೇಳೆ ಹಾಗೆ ಆಗಿದ್ದೇ ಆದಲ್ಲಿ ಅದು ಇತಿಹಾಸವನ್ನು ನಿರ್ಮಿಸುತ್ತದೆ ಎನ್ನಬಹುದು. ಏಕೆಂದರೆ ಈ ಹಿಂದೆ ಇದೇ ಪ್ರೇಮ್‌ ಮತ್ತು ಶಿವಣ್ಣ ಜೋಡಿಯ 'ಜೋಗಿ' ಚಿತ್ರವು ಬಿಡುಗಡೆಯಾಗಿ ಸಂಚಲನೆಗಳನ್ನು ಸೃಷ್ಟಿಸಿದ್ದಾಗ, ಖುದ್ದು ಬೆಂಗಳೂರಿಗೆ ಆಗಮಿಸಿದ ರಜನೀಕಾಂತ್‌ರವರು ಡಾ.ರಾಜ್‌ಕುಮಾರ್ ಜೊತೆಯಲ್ಲಿ ಚಿತ್ರವನ್ನು ವೀಕ್ಷಿಸಿದ್ದರು ಮತ್ತು ಕಾಲಾನಂತರದಲ್ಲಿ ಅದು ತಮಿಳು ಭಾಷೆಗೂ ರಿಮೇಕ್‌ ಆಗಿತ್ತು.

ಒಟ್ಟಿನಲ್ಲಿ ನಗರದ ತುಂಬೆಲ್ಲಾ 'ಜೋಗಯ್ಯ'ನದೇ ಕಲರವ ಎನ್ನಬಹುದು. ಇದು ಚಿತ್ರದ ಗಳಿಕೆಗೆ ಪ್ಲಸ್‌ಪಾಯಿಂಟ್‌ ಆಗಲಿದೆ ಎನ್ನುತ್ತಾರೆ ಓರ್ವ ಚಿತ್ರಪಂಡಿತರು. 'ಜೋಗಯ್ಯ'ನಿಗೆ ಶುಭವಾಗಲಿ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ