ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಬೆಂಗ್ಳೂರಿನ ದುಸ್ಥಿತಿಗೆ ಪರಿಹಾರ 'ಸ್ವಯಂಕೃಷಿ'ಯಲ್ಲಿದೆಯಂತೆ (Swayamkrishi | Ambarish | Veerendrababu | Latest Movies in Kannada | Latest Kannada Movie News | Kannada Film News | Kannada Movies)
ಬೆಂಗ್ಳೂರಿನ ದುಸ್ಥಿತಿಗೆ ಪರಿಹಾರ 'ಸ್ವಯಂಕೃಷಿ'ಯಲ್ಲಿದೆಯಂತೆ
EVENT
ಬಹಳ ದಿನಗಳಿಂದ ಸದ್ದುಮಾಡುತ್ತಿದ್ದ 'ಸ್ವಯಂಕೃಷಿ' ಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಿದೆ. ಚಿತ್ರದ ಬಹುತೇಕ ಭಾಗಗಳು ಮತ್ತು ಹಾಡಿನ ಸನ್ನಿವೇಶಗಳು ಬಹಳ ಹಿಂದೆಯೇ ಚಿತ್ರಿತಗೊಂಡಿದ್ದವಾದರೂ, ಹೆಚ್ಚುವರಿ ದೃಶ್ಯಗಳ ಸೇರ್ಪಡೆಗಾಗಿ ಬಿಡುಗಡೆ ವಿಳಂಬವಾಗಿತ್ತು.
ಈ ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿವೆ. ಅದರಲ್ಲೂ ವಿಶೇಷವಾಗಿ 'ನಾ ಬರೆದೆ ನಿನ್ನ ಹೆಸರಾ' ಎಂಬ ಹಾಡು ಈಗಾಗಲೇ ಸೂಪರ್‌ಹಿಟ್ ಹಾಡುಗಳ ಪಟ್ಟಿಯಲ್ಲಿದೆ. ಈ ಚಿತ್ರದ ನಾಯಕ-ನಿರ್ಮಾಪಕ-ನಿರ್ದೇಶಕರ ಸ್ವಾಮ್ಯದಲ್ಲಿರುವ ಸ್ವಯಂಕೃಷಿ ಎಂಬ ಹೆಸರಿನ ವಾಹಿನಿಯಲ್ಲಿ ಈ ಹಾಡುಗಳು ಪದೇ ಪದೇ ಬಿತ್ತರಗೊಳ್ಳುವ ಮೂಲಕ ವೀಕ್ಷಕರೊಂದಿಗೆ ನಂಟು ಬೆಳೆಸಿಕೊಂಡಿವೆ ಎನ್ನಬಹುದು.
ಈ ಚಿತ್ರದ ನಾಯಕ ವೀರೇಂದ್ರಬಾಬುರವರಿಗೆ ಕಸುಬು ಹೊಸದಾಗಿದೆಯಾದರೂ ಚಿತ್ರವನ್ನು ನಿರೂಪಿಸಿರುವ ರೀತಿ ಉತ್ತಮವಾಗಿದೆ ಎಂದು ಚಿತ್ರತಂಡದವರು ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರವೂ ಸೇರಿದಂತೆ ಇಂದಿನ ಭಾರತದಲ್ಲಿ ಹಾಸುಹೊಕ್ಕಾಗಿರುವ ಹಲವು-ಹನ್ನೊಂದು ಸಮಸ್ಯೆಗಳಿಗೆ, ಅದರಲ್ಲೂ ವಿಶೇಷವಾಗಿ ಬೆಂಗಳೂರು ಮಹಾನಗರಿಯನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಈ ಚಿತ್ರದಲ್ಲಿ ಪರಿಹಾರವನ್ನು ಸೂಚಿಸಲಾಗಿದೆಯಂತೆ. ಹೀಗಾಗಿ ಚಿತ್ರದ ಕಥೆಯೇ ಹೀರೋ ಆಗಿದೆಯಂತೆ.
ರೆಬೆಲ್‌ಸ್ಟಾರ್ ಅಂಬರೀಷ್‌ರನ್ನು ಈ ಚಿತ್ರದಲ್ಲಿ ಮುಖ್ಯಮಂತ್ರಿಯ ಪಾತ್ರದಲ್ಲಿ ತೋರಿಸಿರುವುದು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರಿಗೆ ಒಂದು ಮಹತ್ವದ ಪಾತ್ರವನ್ನು ನೀಡಿರುವುದು ಹೈಲೈಟ್ ಆಗಲಿವೆ ಎಂದು ಹೇಳಲಾಗುತ್ತಿದೆ. ಈ ಎರಡೂ ಅಂಶಗಳು ಚಿತ್ರದ ಯಶಸ್ಸಿಗೆ ಕಾರಣವಾಗಲಿವೆ ಎಂಬುದು ಚಿತ್ರತಂಡದವರ ಅಭಿಪ್ರಾಯ.