ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » ಗಣೇಶ್‌ಗೆ ಕೈ ಕೊಟ್ಟ ಸಂಗಮ
ಸಿನಿಮಾ ವಿಮರ್ಶೆ
Feedback Print Bookmark and Share
 
ಗಣೇಶ್ ಕೈಯಿಂದ ಫೈಟ್ ಮಾಡಿಸಿದರೆ ಚಿತ್ರ ಗೆಲ್ಲುವುದಿಲ್ಲ ಎಂದು ತಿಳಿದ ನಿರ್ದೇಶಕರು ಸಂಗಮದಲ್ಲಿ ಗಣೇಶ್‌ರಿಂದ ಒಂದಷ್ಟು ಡೈಲಾಗ್ ಹಾಗೂ ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಆದರೆ ಒಂದು ಉತ್ತಮ ಕಥೆ, ನಿರೂಪಣೆ ಇಲ್ಲದ ಚಿತ್ರ ಬರೀ ಡೈಲಾಗ್ ಮೇಲೆ ನಿಲ್ಲುವುದಿಲ್ಲ ಎಂಬ ಒಂದು ಸಾಮಾನ್ಯ ಜ್ಞಾನ ಕೂಡಾ ನಿರ್ದೇಶಕರಿಗಿದ್ದಂತಿಲ್ಲ. ಚಿತ್ರದುದ್ದಕ್ಕೂ ಗಣೇಶ್ ಪರ ಪರ.. ಅಂತ ಮಾತನಾಡುತ್ತಲೇ ಹೋಗುತ್ತಾರೆ. ಚಿತ್ರ ಎಲ್ಲೂ ಮನ ಮುಟ್ಟುವುದಿಲ್ಲ.

ರಿಯಲ್ ಎಸ್ಟೇಟ್ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಯುವಕನನ್ನು (ಗಣೇಶ್) ಸಂಪ್ರದಾಯಸ್ಥವಾದ ರಂಗಾಯಣ ರಘು ಕುಟುಂಬ ಭಾರೀ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.

ಅವರಿಗೆ ಒಬ್ಬಳು ಮಗಳು (ವೇದಿಕಾ) ಕೂಡಾ ಇರುತ್ತಾರೆ. ಆದರೆ ಅವರು ಗಣೇಶ್‌ರನ್ನು ಆ ರೀತಿ ನೋಡಿಕೊಳ್ಳಲು ಕಾರಣವೇನು ಎಂಬುದನ್ನು ನಿರ್ದೇಶಕರು ತೋರಿಸಿಲ್ಲ. ಇಲ್ಲಿ ಗಣೇಶ್, ಅವರ ಮಗಳಿಗೆ ಒಳ್ಳೆಯ ಗಂಡು ಸಿಗಲಿ ಎಂದು ಬೆಳಗ್ಗೆ 5 ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡುತ್ತಾರೆ. ಇದರಿಂದ ನಾಯಕಿಗೆ ಗಣೇಶ್ ಮೇಲೆ ಪ್ರೀತಿ ಹುಟ್ಟುತ್ತದೆ.

ಆದರೆ ಗಣೇಶ್ ಪ್ರೀತಿ ಬೇಡ, ಬರೀ ಸ್ನೇಹ ಸಾಕು ಎಂದು ಕೆನ್ನೆಗೆ ಹೊಡೆದು ಬುದ್ದಿ ಹೇಳುತ್ತಾರೆ. ಮನೆಯ ಮೇಲಿನ ಗೌರವಕ್ಕೆ ಗಣೇಶ್ ತಮ್ಮ ಪ್ರೀತಿಯನ್ನು ಬಚ್ಚಿಡುವ ದೃಶ್ಯ ಮುಂಗಾರು ಮಳೆ ಚಿತ್ರವನ್ನು ನೆನಪಿಸುತ್ತಿರುವಂತೆ ನಿರ್ದೇಶಕರು ಚಿತ್ರವನ್ನು ಸುಖಾಂತ್ಯಗೊಳಿಸಿದ್ದಾರೆ.
MOKSHA
ಇಲ್ಲಿ ನಿರ್ದೇಶಕರ ಅನುಭವದ ಕೊರತೆ ಎದ್ದು ಕಾಣುತ್ತದೆ. ಮೂರು ಜನ ಘಟಾನುಘಟಿ ಹಾಸ್ಯ ನಟರಿದ್ದರೂ ಅವರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡಿಲ್ಲ. ನಗುವಿಗೆ ಚಿತ್ರದಲ್ಲಿ ಬರವಿದೆ. ಗಣೇಶ್ ಈ ಚಿತ್ರ ಮತ್ತೊಂದು ಮುಂಗಾರು ಮಳೆ ಆಗಬಹುದೆಂದು ಭಾವಿಸಿದ್ದರು.

ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ಚಿತ್ರದಲ್ಲಿ ಕಥೆಯನ್ನು ಮರೆತು ಡೈಲಾಗ್ ಹಾಗೂ ಕೆಲವು ಹಾಸ್ಯ ದೃಶ್ಯಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ವೇದಿಕಾ ನಟನೆ ಗಮನ ಸೆಳೆಯುತ್ತದೆ. ದೇವಿಶ್ರೀಪ್ರಸಾದ್ ಸಂಗೀತವನ್ನು ನಿರ್ದೇಶಕರು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಒಟ್ಟಾರೆ ಸಂಗಮ ಕೂಡಾ ಗಣೇಶ್‌ಗೆ ಕೈ ಕೊಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಣೇಶ್ ರಂಗಾಯಣ ರಘು ವೇದಿಕಾ ಮುಂಗಾರು ಮಳೆ ಸಂಗಮ