ಸವಾರಿ ಚಿತ್ರ ಬಿಡುಗಡೆಯಾಗಿದೆ. ನಿರ್ದೇಶಕ ಜೇಕಬ್ ವರ್ಗೀಸ್ ಉತ್ತಮ ಚಿತ್ರ ನೀಡಲು ಪ್ರಯತ್ನಿಸಿದ್ದಾರೆ. ಪ್ರೀತಿ ಅಂದ್ರೆ ಏನೂ ಎಂದು ಗೊತ್ತಿರದ ಹುಡುಗನೊಬ್ಬ, ಹುಡುಗಿಯೊಬ್ಬಳಿಂದ ಪ್ರೀತಿ ಅಂದ್ರೆ ಏನೂ ಎಂದು ಅರ್ಥಮಾಡಿಕೊಳ್ಳುತ್ತಾನೆ. ಜೊತೆಗೆ ಶ್ರೀಮಂತ ಕುಟುಂಬಗಳ ಮನಸ್ಥಿತಿ ಮತ್ತು ಮಧ್ಯಮ ವರ್ಗದ ಹೆಣ್ಣುಮಗಳೊಬ್ಬಳ ಮನಸ್ಥಿತಿ ನಡುವೆ ನಡೆಯುವ ಸಂಘರ್ಷ ಯಾತ್ರೆಯೇ ಸವಾರಿ.
ಶ್ರೀಮಂತ ಮನೆತನದ ಹುಡುಗನ ಪಾತ್ರದಲ್ಲಿ ನಟಿಸಿರುವ ರಘು ಮುಖರ್ಜಿ ಅಭಿನಯಕ್ಕೆ ಮನಸೋಲದವರೇ ಇಲ್ಲ. ಭಾರೀ ಸಮಯದ ನಂತರ ರಘು ಮುಖರ್ಜಿ ಅಭಿನಯಿಸಿದರೂ ಅವರ ಅಭಿನಯದಲ್ಲಿ ನೈಜತೆ ಎದ್ದು ಕಾಣುತ್ತದೆ.
ತುಂಟ ಹುಡುಗನಾಗಿ ಶ್ರೀನಗರ ಕಿಟ್ಟಿ ಅಭಿನಯದ ಎಲ್ಲರನ್ನು ಮೋಡಿ ಮಾಡುತ್ತದೆ. ಅವರ ಬಾಡಿ ಲಾಂಗ್ವೆಜ್ ಮತ್ತು ಡೈಲಾಗ್ ಡೆಲಿವರಿ ಎಲ್ಲವೂ ನೈಜವಾಗಿದೆ. ನಾಯಕಿ ಕಮಲಿನಿ ಮುಖರ್ಜಿ ಅಭಿನಯ ಕೂಡಾ ಅಷ್ಟೇ ನೈಜವಾಗಿ ಮೂಡಿ ಬಂದಿದೆ. ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಣಿಕಾಂತ್ ಕದ್ರಿಯವರ ಸಂಗೀತ ಮತ್ತೆ ಮತ್ತೆ ಕೇಳುವಂತಿದೆ. ಒಟ್ಟಾರೆ ಸವಾರಿಯನ್ನು ಆರಾಮವಾಗಿ ನೋಡಿಬರಬಹುದು.