ಚಿತ್ರ: ಒಲವೇ ಜೀವನ ಲೆಕ್ಕಾಚಾರ ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್ ತಾರಾಂಗಣ: ಶ್ರೀನಗರ ಕಿಟ್ಟಿ, ರಾಧಿಕಾ ಪಂಡಿತ್, ರಂಗಾಯಣ ರಘು
ಎಂದಿನಂತೆಯೇ ಒಂದು ಯಶಸ್ವಿ ಕೌಟುಂಬಿಕ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ಪ್ರೇಕ್ಷಕರಿಗೆ ಕೊಟ್ಟಿದ್ದಾರೆ. ಅದೇ ಆಕ್ಷನ್, ಲವ್ ಸ್ಟೋರಿ, ಹೊಡೆದಾಟದ ಸಿನಿಮಾವನ್ನು ನೋಡಿ ಬೇಸತ್ತಿರುವ ಪ್ರೇಕ್ಷಕರಿಗೆ ಒಂದು ಡಿಫರೆಂಟ್ ಚಿತ್ರವನ್ನು ನೀಡಿದ್ದಾರೆ.
ಚಿತ್ರದ ಹೆಸರಿಗೆ ತಕ್ಕಂತೆ ಚಿತ್ರವನ್ನು ಮಾಡಿರುವ ನಾಗತಿಹಳ್ಳಿಯವರ ಈ ಚಿತ್ರದ ಕಥೆ ವೆರಿ ಸಿಂಪಲ್, ಹುಡುಗಿಯರು ಹೇಳಿ ಕೇಳಿ ಲೆಕ್ಕಾಚಾರದವರು. ಅದರಲ್ಲೂ ಪ್ರೀತಿ ಇದೆಯಲ್ಲಾ ಅದಂತೂ ಫುಲ್ ಲೆಕ್ಕಾಚಾರನೇ ಎಂದು ತಿಳಿದುಕೊಂಡಿರುವ ಉಪನ್ಯಾಸಕ. ಗುರು ಹೇಳಿದ್ದೇ ವೇದವಾಕ್ಯ ಎಂದು ನಂಬುವ ನಾಯಕ. ಪ್ರೀತಿನೇ ತನ್ನ ಜೀವನ ಎನ್ನುವ ನಾಯಕಿ. ಇದರ ಸುತ್ತಲಿನಲ್ಲೇ ಕಥೆಯನ್ನು ಹೆಣೆದಿದ್ದಾರೆ. ಚಿತ್ರದಲ್ಲಿ ನಾಯಕನ ಹೆಸರು ಬಾಲು. ನಿಜಕ್ಕೂ ನಾಯಕ ಅಂದುಕೊಂಡಂತೆ ಪ್ರೀತಿ ಅನ್ನೋದು ಲೆಕ್ಕಾಚಾರದಿಂದ ಕೂಡಿರುತ್ತದೆಯೇ ಎಂಬುದನ್ನು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಅದ್ಬುತವಾಗಿ ತೋರಿಸಲು ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಚಿತ್ರದಲ್ಲಿ ಮೂರು ರೀತಿಯ ಕ್ಲೈಮ್ಯಾಕ್ಸ್ ತೋರಿಸಿದ್ದಾರೆ. ಆದರೆ ಪ್ರೇಕ್ಷಕನಿಗೆ ಎಲ್ಲೂ ಬೋರ್ ಆಗುವುದಿಲ್ಲ. ಚಿತ್ರದ ಕಥೆ ಬಗ್ಗೆ ಯಾರು ಮಾತನಾಡುವಂತಿಲ್ಲ. ಆದರೆ ಹಾಡುಗಳನ್ನು ಅನಾವಶ್ಯವಾಗಿ ತೋರಿಸಲಾಗಿದೆ. ಚಿತ್ರದಲ್ಲಿ ಹಾಡುಗಳು ಇಲ್ಲದಿದ್ದರು ನಡೆದು ಹೋಗುತ್ತಿತ್ತು. ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ತೋರಿಸಿದ್ದಾರೆ.
ಇನ್ನುಳಿದಂತೆ ಚಿತ್ರದಲ್ಲಿ ಚಿತ್ರಕಥೆ ಮತ್ತು ತಾಂತ್ರಿಕತೆ ಎಲ್ಲಾ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿ ಉಪನ್ಯಾಸಕನ ಪಾತ್ರ ಮಾಡಿರುವ ರಂಗಾಯಣ ರಘು ಅಂತೂ ಕೊಟ್ಟ ಪಾತ್ರವನ್ನು ಅದ್ಬುತವಾಗಿ ನಿಭಾಯಿಸಿಕೊಂಡು ಹೋಗಿದ್ದಾರೆ. ಹಾಗೆ ಚಿತ್ರದ ನಾಯಕ ಶ್ರೀನಗರ ಕಿಟ್ಟಿ ಕೂಡ ಯಾವುದೇ ಪಾತ್ರ ಕೊಟ್ಟರು ಮಾಡಬಲ್ಲರು ಎಂಬುದನ್ನು ನಿರೂಪಿಸಿದ್ದಾರೆ. ನಾಯಕಿ ರಾಧಿಕಾ ಪಂಡಿತ್ ಕೂಡ ಕೊಟ್ಟಿದ್ದನ್ನು ನೀಟಾಗಿ ನಿಭಾಯಿಸಿದ್ದಾರೆ. ಏನೆ ಆಗಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರ ನಿರ್ದೇಶನದಲ್ಲಿ ಶಹಬ್ಬಾಷ್ ಎನಿಸಿಕೊಂಡವರು ಅದನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ತಮ್ಮ ಲೆಕ್ಕಾಚಾರದಂತೆ ಚಿತ್ರ ಮೂಡಿಬಂದಿದೆ.