ಕೊನೆಗೂ ಬಹು ನಿರೀಕ್ಷೆ ಹುಟ್ಟಿಸಿದ್ದ ಪ್ರೀತ್ಸೆ ಪ್ರೀತ್ಸೆ ಚಿತ್ರ ಟುಸ್ಸೆಂದಿದೆ. ಅಂದುಕೊಂಡಂತೆ ಚಿತ್ರ ಮೂಡಿ ಬಂದಿಲ್ಲ. ಈ ಚಿತ್ರದಲ್ಲಿ ನಿರ್ದೇಶಕ ಮಾದೇಶ್ ಫೇಲ್ ಆಗಿದ್ದಾರೆ. ಚಿತ್ರದ ಕಥೆ ಬಗ್ಗೆ ಹೇಳಬೇಕೆಂದರೆ, ಚಿತ್ರದಲ್ಲಿ ನಾಯಕ ಶ್ರೀಮಂತ ಹುಡುಗ. ವರ್ತನೆಯಲ್ಲಿ ತುಂಬಾ ಸೈಲೆಂಟ್. ಆದರೆ ಅದೇ ಕಾಲೇಜಿನಲ್ಲಿ ಓದುವ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾನೆ. ಇವರಿಬ್ಬರ ನಡುವಿನ ಪ್ರೀತಿಯನ್ನು ಡಿಫರೆಂಟ್ ಆಗಿ ತೋರಿಸಲು ಹೋಗಿ ಪ್ರೇಕ್ಷಕರನ್ನು ಗೊಂದಲಕ್ಕೆ ತಳ್ಳುತ್ತಾರೆ.
ಚಿತ್ರದಲ್ಲಿ ಕೆಲ ಕಡೆ ಅನಾವಶ್ಯಕವಾಗಿ ಫೈಟ್ ಮಾಡಿಸಿದ್ದಾರೆ. ನಾಯಕನ ಅಪ್ಪ-ಅಮ್ಮ ತುಂಬಾ ಬ್ಯುಸಿ. ಯಾವಾಗಲೂ ಬೆಂಗಳೂರು-ಲಂಡನ್ ಅಂತ ತಿರುಗಾಡುತ್ತಲೇ ಇರುತ್ತಾರೆ. ನಾಯಕನ ಪಾತ್ರ ನಿರ್ವಹಿಸಿದ ಯೋಗಿ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿಯೇ ನಿಭಾಯಿಸಿದ್ದಾರೆ. ಆದರೆ ಅವರಿಂದ ಸರಿಯಾಗಿ ನಟನೆ ಮಾಡಿಸಲು ನಿರ್ದೇಶಕರು ವಿಫಲವಾಗಿದ್ದಾರೆ.
ಇನ್ನು ಚಿತ್ರದ ಹಾಡುಗಳಂತೂ ಹೇಳೋದೇ ಬೇಡ. ಎಲ್ಲೋ ಒಂದೆರಡು ಹಾಡುಗಳನ್ನು ಹೊರತುಪಡಿಸಿ ಮತ್ಯಾವ ಹಾಡುಗಳು ಹೇಳಿಕೊಳ್ಳುವಂತ್ತಿಲ್ಲ. ಚಿತ್ರದಲ್ಲಿ ಇಬ್ಬರು ನಾಯಕಿಯರನ್ನು ಅನಾವಶ್ಯವಾಗಿ ಬಳಸಿಕೊಳ್ಳ:ಲಾಗಿದೆ. ಪ್ರಜ್ಞಾಗೆ ನಟನೆಯೇ ಬರುವುದಿಲ್ಲ ಅಂತ ಹೇಳಿದರೆ ತಪ್ಪಾಗಲಾರದು. ಇನ್ನೂ ಉದಯತಾರಾ ಪರವಾಗಿಲ್ಲ. ಇನ್ನುಳಿದಂತೆ ಕ್ಯಾಮೆರಾ ವರ್ಕ್ ಎಲ್ಲಾ ಓಕೆ. ಅಂತೂ, ಯೋಗಿಯ ಹ್ಯಾಟ್ರಿಕ್ ಕನಸು ನುಚ್ಚು ನೂರಾಗಿದೆ.