ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » ಪುನೀತ್ ಗೆದ್ದ 'ರಾಜ', ಪ್ರೇಮ್ ಬಿದ್ದ 'ಶೋಮ್ಯಾನ್'..! (Raj The showman | Puneeth Rajkumar | Prem | Kannada film)
ಸಿನಿಮಾ ವಿಮರ್ಶೆ
Feedback Print Bookmark and Share
 
Raj - Nisha Kottari, Puneeth
MOKSHA
ಚಿತ್ರ: ರಾಜ್ ದಿ ಶೋಮ್ಯಾನ್
ನಿರ್ದೇಶನ: ಪ್ರೇಮ್
ತಾರಾಗಣ: ಪುನೀತ್ ರಾಜ್‌ಕುಮಾರ್, ನಿಶಾ ಕೊಠಾರಿ, ಆದಿ ಲೋಕೇಶ್, ಮುನಿ

ಮಾಮೂಲಿ ಕಥೆಗೆ ಸುಣ್ಣ-ಬಣ್ಣ ಹಚ್ಚಿ ಎಲ್ಲೆಲ್ಲೋ ತಿರುವುಗಳನ್ನು ನೀಡಿ ನಾಯಕ ಶ್ರೀಮಂತನಾಗುವಷ್ಟರಲ್ಲಿ ಪ್ರೇಕ್ಷಕರು ಹೈರಾಣಾಗಿರುತ್ತಾರೆ. ಹಲವು ಚಿತ್ರಗಳನ್ನು ನೆನಪಿಸುತ್ತಾ ಹೋಗುವ ಕಥೆಯಲ್ಲೇ ತೊಡಕು. ಚಿತ್ರದ ಭಾರವೆಲ್ಲ ಪುನೀತ್ ರಾಜ್‌ಕುಮಾರ್ ಹೆಗಲಲ್ಲೇ ಸಾಗುತ್ತದೆ. ನಿರ್ದೇಶಕ ಪ್ರೇಮ್ ಈ ರೀತಿ ಟೀಕೆಗೊಳಗಾಗುತ್ತಿರುವ ಎರಡನೇ ಚಿತ್ರವಿದು ಎನ್ನುವುದು ಗಮನಾರ್ಹ.

ಹಳ್ಳಿ ಹುಡುಗ ಮುತ್ತು ರಾಜನಿಗೆ (ಪುನೀತ್ ರಾಜ್ ಕುಮಾರ್) ಸಿನಿಮಾದಲ್ಲಿ ನಟಿಸಬೇಕೆಂಬ ಹಂಬಲ. ಅದಕ್ಕಾಗಿ ಮನೆಯನ್ನೇ ಬಿಟ್ಟವನು. ನಗರಕ್ಕೆ ಬಂದವನೇ ಸಹಾಯಕ ನಟನಾಗಿ ವೃತ್ತಿ ಆರಂಭಿಸಿದ. ಅಷ್ಟರಲ್ಲೇ ಎಡತಾಕಿದ ಒಬ್ಬ ಸಹಾಯಕ ನಿರ್ದೇಶಕ ನಾಯಕನನ್ನಾಗಿ ಮಾಡುತ್ತೇನೆ ಎಂಬ ಭರವಸೆ ನೀಡುತ್ತಾನೆ.
Director Prem
MOKSHA


ಆ ಸಿನಿಮಾದ ನಾಯಕಿ ಪಾರ್ವತಿ (ನಿಶಾ ಕೊಠಾರಿ) ಐ ಲವ್ ಯೂ ಎನ್ನಲು ಇಷ್ಟವಿಲ್ಲ ಎನ್ನುತ್ತಾಳೆ. ಈ ವಾಕ್ಯವನ್ನು ನಾನು ನನ್ನ ಪ್ರಿಯಕರನಿಗೆ ಮಾತ್ರ ಹೇಳುವುದಾಗಿ ಚಿತ್ರತಂಡದಿಂದ ಹೊರಬರುತ್ತಾಳೆ. ಮುತ್ತು ರಾಜ ನಾಯಕನಾಗುವ ಆಸೆಗೆ ಕಲ್ಲು ಬೀಳುತ್ತದೆ.

ಆಗ ಪುನೀತ್ ಆಕೆಯ ಮನವೊಲಿಸಲು ಹೋಗುತ್ತಾನೆ. ಭೂಗತ ಜಗತ್ತನ್ನು ಆವಾಹಿಸಿಕೊಂಡ ಸಂಬಂಧಿಕನೋರ್ವ ಪಾರ್ವತಿಯನ್ನು ಮದುವೆಯಾಗಿಯೇ ತೀರುತ್ತೇನೆ ಎಂದು ಹೊರಟಿರುತ್ತಾನೆ. ಈ ನಡುವೆ ಹಲವು ಮಚ್ಚು-ಕೊಚ್ಚುಗಳನ್ನು ಪ್ರೇಕ್ಷಕರು ಸಹಿಸಿಕೊಳ್ಳಬೇಕಾಗುತ್ತದೆ. ಆಕೆಯನ್ನು ಮರಳಿ ಕರೆ ತರಲು ನಾಯಕ ಸಫಲನಾಗುತ್ತಾನೋ, ಆತನ ಕನಸು ನನಸಾಗುತ್ತದೋ ಎನ್ನುವುದನ್ನು ಟಾಕೀಸಿನಲ್ಲೇ ನೋಡಬೇಕು.
Puneeth with Raj heroines
MOKSHA


ಅಭಿನಯದ ಬಗ್ಗೆ ಹೇಳಿದರೆ ಪುನೀತ್ ಎದುರು ಬಾಲಿವುಡ್ ಬೆಡಗಿ ನಿಶಾ ಕೊಠಾರಿ ಗೊಂಬೆ. ದೇಹ ಕೇವಲ ಪ್ರದರ್ಶನಕ್ಕಷ್ಟೇ ಮೀಸಲು, ನಟನೆಗಲ್ಲ. ವರನಟ ರಾಜ್ ಕುಮಾರ್ ಜತೆಗೆ ನಟಿಸಿದ್ದ ನಾಯಕಿಯರ ಜತೆ ಪುನೀತ್ ಲೀಲಾಜಾಲವಾಗಿ ಹೆಜ್ಜೆ ಹಾಕಿದರೂ ನೋಡಲೇ ಬೇಕೆನಿಸುವುದಿಲ್ಲ.

ಚಿತ್ರಕತೆ ಗಮನ ಸೆಳೆಯುವಂತದ್ದಲ್ಲ. ಆದರೆ ಚಿತ್ರಕ್ಕೆ ಬಳಸಲಾಗಿರುವ ತಾಂತ್ರಿಕತೆ ಕಣ್ಣು ಕುಕ್ಕುತ್ತದೆ. ಸ್ಪೆಷಲ್ ಎಫೆಕ್ಟ್ ಚಿತ್ರದ ತೂಕ ಹೆಚ್ಚಿಸಿದೆ. ಹರಿಕೃಷ್ಣ ಸಂಗೀತ ಮತ್ತು ಕೃಷ್ಣ ಛಾಯಾಗ್ರಹಣ ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಒಂದೆರಡು ಹಾಡುಗಳಂತೂ ಕುಣಿಸುತ್ತವೆ.

ಒಟ್ಟಾರೆ 'ರಾಜ್ - ದಿ ಶೋಮ್ಯಾನ್' ಕನ್ನಡ ಚಿತ್ರರಂಗದಲ್ಲಿ ಪ್ರಚಾರದಿಂದಲೇ ಇತಿಹಾಸ ಸೃಷ್ಟಿಸಿದ ಚಿತ್ರ ಎಂದರೆ ತಪ್ಪಾಗಲಾರದು. ಹಾಗಾಗಿ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳ ಕಾತರ-ಕುತೂಹಲಕ್ಕೆ ಚಿತ್ರ ಭರ್ಜರಿ ಪ್ರಾರಂಭವನ್ನೇ ಕೊಟ್ಟಿದೆ. ಅಂತೂ ಅಭಿಮಾನಿಗಳ ನಿರೀಕ್ಷೆಯನ್ನು 'ರಾಜ್'ಪೂರ್ತಿಯಾಗಿ ಹುಸಿ ಮಾಡಿಲ್ಲ-- ಪುನೀತ್ ನಾಯಕ ನಟನಾಗಿರುವುದರಿಂದ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಜ್ ದಿ ಶೋಮ್ಯಾನ್, ಕನ್ನಡ, ಪುನೀತ್ ರಾಜ್ಕುಮಾರ್, ಪ್ರೇಮ್, ಸಿನಿಮಾ, ವಿಮರ್ಶೆ