ಚಿತ್ರ: ಶ್ರೀ ಹರಿಕಥೆ ನಿರ್ದೇಶನ: ದಯಾಳ್ ತಾರಾಗಣ: ಶ್ರೀಮುರಳಿ, ಪೂಜಾ ಗಾಂಧಿ, ರಾಧಿಕಾ ಗಾಂಧಿ
ನಿರ್ದೇಶಕ ದಿನೇಶ್ ಬಾಬು ಅವರು ಮಾಡಿರುವ ಹಲವಾರು ಚಿತ್ರಗಳಲ್ಲಿ ಮೂರನೆಯವರ ಪ್ರವೇಶದಲ್ಲಿ ಗಂಡ ಮತ್ತು ಹೆಂಡತಿ ನಡುವಿನ ಸಂಬಂಧವೇ ಹೆಚ್ಚು. ಅವುಗಳಲ್ಲಿ ಹೆಂಡ್ತಿಗೇಳ್ಬೇಡಿ ಕೂಡ ಒಂದು. ಇದೀಗ ಅಂತಹುದೇ ಒಂದು ಥ್ರಿಲ್ಲರ್ ಚಿತ್ರವನ್ನು ನಿರ್ದೇಶಕ ದಯಾಳ್ ಜನರ ಮುಂದಿಟ್ಟಿದ್ದಾರೆ. ಅದು ಶ್ರೀ ಹರಿಕಥೆ. ಸಸ್ಪೆನ್ಸ್ ಜೊತೆಗೆ ಹಾಸ್ಯದ ಮಿಶ್ರಣ ಇಲ್ಲಿದೆ.
ಬ್ಯುಸಿನೆಸ್ ಮಾನ್ ಆಗಿರುವ ಶ್ರೀಮುರಳಿ (ಶ್ರೀಹರಿ) ಮದುವೆಗಾಗಿ ಹಣ ಒಟ್ಟುಗೂಡಿಸಿರುತ್ತಾನೆ. ಮದುವೆಯ ನಂತರ ಮಾಡೋದನ್ನು ಮದುವೆಗೂ ಮುನ್ನ ಮಾಡಬಾರದು ಎನ್ನೋದು ಶ್ರೀಹರಿಯ ಸಿದ್ಧಾಂತ. ಆದರೆ, ಇದಕ್ಕೆ ಪೂರ್ತಿಯಾಗಿ ವಿರುದ್ಧವಾಗಿರುವವನು ಅವನ ಗೆಳೆಯ ನವೀನ್ ಕೃಷ್ಣ. ನವೀನ್‌ಗೆ ಸ್ವಲ್ಪ ಹುಡುಗರ ಹುಚ್ಚು.
PR
ಹೀಗೊಂದು ದಿನ ಓದುತ್ತಿರುವ ರಾಧಿಕಾ ಗಾಂಧಿ (ಪ್ರಕೃತಿ) ಜೊತೆಯಲ್ಲಿ ಶ್ರೀಮುರಳಿಯ ವಿವಾಹವಾಗುತ್ತದೆ. ಆದರೆ ಓದು ಮುಗಿಯುವ ತನಕ ಒದಾಗುವುದು ಬೇಡವೆಂದು, ಬೇರೆ ಬೇರೆಯಾಗಿರುವಂತೆ ಆಕೆ ಷರತ್ತು ಹಾಕುತ್ತಾಳೆ. ಇದಕ್ಕೆ ಒಪ್ಪುವ ಗಂಡ ಶ್ರೀಹರಿ ಒಂಭತ್ತು ತಿಂಗಳು ಕಾಯುತ್ತಾನೆ. ಆದರೆ ಮತ್ತೂ ಮುಂದೂಡುವ ಹೆಂಡತಿಯ ನಿರ್ಧಾರದಿಂದ ಬೇಸರಗೊಂಡ ಅವನು ಪೂಜಾಗಾಂಧಿ (ಪೂಜಾ) ಜೊತೆ ಒಂದು ರಾತ್ರಿ ಕಳೆಯಲು ಯೋಚಿಸುತ್ತಾನೆ. ಇದಕ್ಕೆ ಆಕೆ ಒಪ್ಪುತ್ತಾಳೆ. ಆದರೆ, ಮರುದಿನವೇ ಆಕೆಯ ಕೊಲೆಯಾಗುತ್ತದೆ! ಇಲ್ಲಿವರೆಗೆ ಹಾಸ್ಯವಾಗಿ ಸಾಗುತ್ತಿದ್ದ ಕಥೆ ಇದ್ದಕ್ಕಿಂದ್ದಂತೆ ಸಸ್ಪೆನ್ಸ್ ಕಥೆಯಾಗಿ ತಿರುವು ಪಡೆಯುತ್ತದೆ.
ಒಟ್ಟಿನಲ್ಲಿ ನವೀನ್ ಕೃಷ್ಣ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಪೂಜಾ ಗಾಂಧಿ ಮತ್ತು ಶ್ರೀಮುರುಳಿ ಅಭಿನಯ ಎಂದಿನಂತೆ ಸಹಜವಾಗಿದೆ. ಚಿತ್ರದ ಸಂಗೀತ ಸಿನಿಮಾ ಮುಗಿದ ಮೇಲೂ ಕಿವಿಯಲ್ಲಿ ಗುಂಯ್‌ಗುಟ್ಟುತ್ತದೆ. ಮೊದಲಾರ್ಧದಲ್ಲಿ ನವೀನ್ ಕೃಷ್ಣ ಪ್ರಮುಖವಾಗುತ್ತಾರೆ. ಅವರ ಹಾಸ್ಯ ಇಷ್ಟವಾಗುತ್ತದೆ. ದಯಾಳ್ ಈ ಬಾರಿ ಕೊಂಚ ವಿಭಿನ್ನವಾಗಿ ಚಿತ್ರ ನೀಡಲು ಪ್ರಯತ್ನ ಪಟ್ಟಿದ್ದಾರೆ ಎಂದರೆ ಸುಳ್ಳಲ್ಲ.