ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » ಗಣೇಶ್ ಅಭಿಮಾನಿಗಳಿಗೆ ಹಬ್ಬದೂಟದ ಉಲ್ಲಾಸ ಉತ್ಸಾಹ (Golden Star Ganesh | Ullasa Uthsaha | Yami Gouthami)
ಸಿನಿಮಾ ವಿಮರ್ಶೆ
Bookmark and Share Feedback Print
 
MOKSHA
ಗಣೇಶ್ ಅಭಿನಯದ ಇನ್ನೊಂದು ಮಹತ್ವಾಕಾಂಕ್ಷೆಯ ಚಿತ್ರ ಉಲ್ಲಾಸ ಉತ್ಸಾಹ. ತೆಲುಗಿನ ಉಲ್ಲಾಸಂಗ ಉತ್ಸಾಹಂಗ ಚಿತ್ರದ ರಿಮೇಕ್ ಅವತರಣಿಕೆಯಾಗಿರುವ ಇದು, ಕೊನೆಗೂ ತಿಣುಕಾಡಿ ಬಿಡುಗಡೆ ಕಾಣುವಲ್ಲಿ ಯಶಸ್ವಿಯಾಗಿದೆ.

ಚಿತ್ರದಲ್ಲಿ ಗಣೇಶ್ ಅವರ ಧಮಾಕಾ ಅಭಿನಯದ ಜೊತೆಗೆ, ನಗು, ರೋಮಾಂಚನ, ನೋವು, ಕಣ್ಣೀರು, ಪ್ರೀತಿ ಯಾವುದಕ್ಕೂ ಕೊರತೆ ಇಲ್ಲ. ಎಲ್ಲವನ್ನೂ ತೂಕ ಬದ್ಧವಾಗಿ ಅಚ್ಚುಕಟ್ಟಾಗಿ ಜೋಡಿಸಿ ಕಟ್ಟಿಕೊಡಲಾಗಿದೆ. ಎಲ್ಲಿಯೂ ಚಿತ್ರ ಅಸಮತೋಲನಗೊಳ್ಳುವುದೇ ಇಲ್ಲ. ಇದು ಉಲ್ಲಾಸ ಉತ್ಸಾಹದ ಯಶಸ್ಸಿಗೂ ಸಹಕಾರಿಯಾಗಬಹುದು.

ಈ ಚಿತ್ರದಲ್ಲಿ ಗಣೇಶ್ ಮಳೆಯ ಹ್ಯಾಂಗೋವರ್‌ನಿಂದ ಆಚೆ ಬಂದಿದ್ದಾರೆ. ಆದರೆ, ಅದೇ ಹಳೆಯ ನಗು, ತುಂಟತನ, ಮಂದ ನಟನೆ, ಹಾಸ್ಯ, ನೋಟ, ಪ್ರೇಮ... ಇಲ್ಲೂ ಇದೆ. ಇಲ್ಲಿ ಯಾವುದೂ ಬದಲಾಗಿಲ್ಲ.
MOKSHA


ಗಣೇಶ್ ನಟನೆಗೆ ಮೋಸವಾಗಿಲ್ಲ. ನಾಯಕಿ ಯಾಮಿ ಗೌತಮಿ ಪರಭಾಷಾ ನಟಿ ಎಂದು ಗೊತ್ತಾಗುವ ಮುನ್ನವೇ ಇಷ್ಟವಾಗಿಬಿಡುತ್ತಾರೆ. ಚಿತ್ರಕಥೆ ಹಾಗೂ ನಿರೂಪಣೆಗೆ ಹೋಲಿಸಿದರೆ ಸಂಭಾಷಣೆಯಲ್ಲಿ ಕೊರತೆ ಕಾಣುತ್ತದೆ. ಹೀಗಿದ್ದೂ ಶರಣ್, ಮಿತ್ರಾ ಮೊದಲಾದವರು ಬಂದುಹೋದಾಗ ನೋಡಿಸಿಕೊಂಡು ಹೋಗುತ್ತದೆ. ರಂಗಾಯಣ ರಘುಅವರಿಗೆ ಕೆಲಸ ಹಾಗೂ ಮಾತು ಕಡಿಮೆ. ತುಳಸಿ ಶಿವಮಣಿ ತಾಯಿಯ ಪಾತ್ರಕ್ಕೆ ನೀರೆರೆದಿದ್ದಾರೆ.

ಉಳಿದಂತೆ ಹೆಚ್ಚಿನ ಪಾತ್ರಗಳು ತಲೆಯಲ್ಲಿ ರಿಜಿಸ್ಟರ್ ಆಗುವುದಿಲ್ಲ. ಸಂಗೀತದಲ್ಲಿ ಮೂರು ಹಾಡುಗಳದ್ದೇ ಹಬ್ಬ. ಜಯಂತ್ ಕಾಯ್ಕಿಣಿ ಮಿಂಚುತ್ತಾರೆ, ಕವಿರಾಜ್, ರಾಮ್ ನಾರಾಯಣ್ ಮಿಂಚಿದ್ದಾರೆ. ಒಟ್ಟಾರೆ ಕೊಟ್ಟ ಕಾಸಿಗೆ, ಎರಡೂವರೆ ತಾಸಿಗಂತೂ ಮೋಸವಿಲ್ಲ. ಅತಿಯಾದ ಹೊಡೆದಾಟ, ಬಡಿದಾಟವಿಲ್ಲ. ನಗುವಿಗೆ ಬರವಿಲ್ಲ. ಮನರಂಜನೆಗೆ ಮೋಸವಿಲ್ಲ ಎಂದಷ್ಟೇ ಹೇಳಬಹುದು. ಲೈಟಾಗಿ ಕುಟುಂಬ ಸಮೇತ ಒಂದು ಸಂಜೆ ಎಂಜಾಯ್ ಮಾಡಬಲ್ಲ ಚಿತ್ರವಿದು.

ಉಲ್ಲಾಸ ಉತ್ಸಾಹ ಚಿತ್ರದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಲ್ಲಾಸ ಉತ್ಸಾಹ, ಗಣೇಶ್, ಯಾಮಿ ಗೌತಮಿ