ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » ಪ್ರಜ್ವಲ್ ಐಂದ್ರಿತಾ ಜೋಡಿಯ 'ನನ್ನವನು' ಪರವಾಗಿಲ್ಲ (Prajwal Devaraj | Nannavanu | Aindritha Rey | Kannada Cinema)
ಸಿನಿಮಾ ವಿಮರ್ಶೆ
Bookmark and Share Feedback Print
 
PR
ಚಿತ್ರ- ನನ್ನವನು
ತಾರಾಗಣ- ಪ್ರಜ್ವಲ್ ದೇವರಾಜ್, ಐಂದ್ರಿತಾ ರೇ
ನಿರ್ದೇಶನ- ಶ್ರೀನಿವಾಸರಾಜ

ಇದೊಂಥರಾ ಲವ್ ಸ್ಟೋರಿ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಚಿತ್ರಗಳೆಲ್ಲಾ ಇದೇ ರೀತಿಯದ್ದು. ಆದರೆ ಈ ಚಿತ್ರದಲ್ಲಿ ಏನೋ ಧಮ್ ಇದೆ. ಒಂದಿಷ್ಟು ಲವಲವಿಕೆ ಇದೆ. ಜೊತೆಗೆ ಇಳಯರಾಜರ ಇಂಪಾದ ಸಂಗೀತವಿದೆ. ಹಾಗಾಗಿ ಚಿತ್ರ ಒಮ್ಮೆ ನೋಡಿಸುಬಲ್ಲದು.

ಹೀಗಂತ ಹೇಳುತ್ತಾ ಚಿತ್ರ ಮಂದಿರದಿಂದ ಆಚೆ ಬರುತ್ತಿದ್ದಾರೆ 'ನನ್ನವನು' ನೋಡಿದ ಪ್ರೇಕ್ಷಕರು. ಒಂದು ಆಪ್ತತೆ ಹುಟ್ಟಿಸುವ ಸಾಮರ್ಥ್ಯ ಈ ಚಿತ್ರಕ್ಕೆ ಇದೆ. ಸಾಕಷ್ಟು ಈ ಮಾದರಿ ಚಿತ್ರ ಬಂದಿದ್ದರೂ, ಇದೊಂಥರಾ ಭಿನ್ನವಾಗಿ ನಿಲ್ಲುತ್ತದೆ. ನಟ, ನಟಿಯರ ಅಭಿನಯವೂ ಚೆನ್ನಾಗಿದೆ. ಕಥೆ, ಚಿತ್ರ ಕಥೆ, ನಿರ್ದೇಶನದ ಹೊಣೆ ಹೊತ್ತ ಶ್ರೀನಿವಾಸರಾಜು ಎಲ್ಲದರಲ್ಲೂ ಅಚ್ಚುಕಟ್ಟುತನ ಮೆರೆದಿದ್ದಾರೆ. ಕೆಲವೊಮ್ಮೆ ಎಲ್ಲವನ್ನೂ ಮಾಡಲು ಹೋಗಿ ಏನನ್ನೂ ಮಾಡಲಾಗದೇ ಹೋಗುವವರು ಹೆಚ್ಚು. ಆದರೆ ಇಲ್ಲಿ ಆ ಸ್ಥಿತಿ ಆಗಿಲ್ಲ.

ಇದೊಂದು ಪುನರ್ಜನ್ಮಕ್ಕೆ ಸಂಬಂಧಿಸಿದ ಚಿತ್ರವಾಗಿದ್ದರಿಂದ ನಿರ್ಮಾಣದಲ್ಲಿ ಸಾಕಷ್ಟು ಸವಾಲು ಇರುತ್ತದೆ. ಅದನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ನಟನಿಗೆ ನಟಿ ಚಿತ್ರದ ಕಥೆ ಹೇಳುತ್ತಾ ಹೋಗುವುದನ್ನು ಚಿತ್ರವಾಗಿಸಿದ್ದು, ನಿಜಕ್ಕೂ ಒಂದು ಪ್ರೇಮಕಥೆಗೆ ವಿಶೇಷ ಟಚ್ ನೀಡಿರುವುದು ಅರಿವಾಗುತ್ತದೆ.

ಚಿತ್ರದಲ್ಲಿ ಊಹಿಸಬಲ್ಲುದಾದ ಕ್ಲೈಮ್ಯಾಕ್ಸ್ ಇದ್ದರೂ, ಉತ್ತಮ ನಟನೆಯಿಂದಾಗಿ ಪ್ರಜ್ವಲ್ ಹಾಗೂ ಐಂದ್ರಿತಾ ಚಿತ್ರವನ್ನು ನೋಡುವಂತೆ ಮಾಡಿದ್ದಾರೆ ಎಂದರೆ ತಪ್ಪಿಲ್ಲ. ಪಿ. ತುಳಸಿ ಗೋಪಾಲ್ ನಿರ್ಮಿಸಿರುವ ಚಿತ್ರಕ್ಕೆ ಇಳಯರಾಜಾ ಸಂಗೀತ ಇದೆ. ಎರಡು ಹಾಡು ಇಂಪಾಗಿದೆ. ಛಾಯಾಗ್ರಹಣ ಹಾಗೂ ಸಂಕಲನ ಪರವಾಗಿಲ್ಲ. ಕೋಮಲ್ ಹಾಸ್ಯ ಗಮ್ಮತ್ತಾಗಿದೆ. ಉಳಿದಂತೆ ಅವಿನಾಶ್, ಬ್ಯಾಂಕ್ ಜನಾರ್ದನ್ ಪರವಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಜ್ವಲ್ ದೇವರಾಜ್, ಐಂದ್ರಿತಾ, ನನ್ನವನು