ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » ಇಂದ್ರಜಿತ್‌ರಿಂದ ಮಿಸ್ಸಾದ ಫುಲ್ ಮಿಲ್ಸ್ (Kannada cinema | Sandalwood | ,Indrajeet)
ಸಿನಿಮಾ ವಿಮರ್ಶೆ
Bookmark and Share Feedback Print
 
NRB
ಚಿತ್ರ: ಹುಡುಗ ಹುಡುಗಿ
ನಿರ್ದೇಶಕ: ಇಂದ್ರಜಿತ್ ಲಂಕೇಶ್
ತಾರಾಗಣ: ಧ್ಯಾನ್, ಸದಾ, ಇಲಿಯಾನಾ, ಶರಣ್, ರಂಗಾಯಣ ರಘ

ಸ್ಯಾಂಡಲ್‌ವುಡ್ ಸ್ಟಾರ್ ನಿರ್ದೇಶಕನೆಂದೇ ಖ್ಯಾತರಾದ ಇಂದ್ರಜಿತ್ ಲಂಕೇಶ್, ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ನಿರ್ದೇಶಕ ಎನ್ನುವುದನ್ನು `ಹುಡುಗ ಹುಡುಗಿ' ಚಿತ್ರದಲ್ಲಿ ತೋರಿದ್ದಾರೆ. ಇಂದಿನ ಪೀಳಿಗೆಗೆ ಇಷ್ಟವಾಗುವ ಸನ್ನಿವೇಶಗಳನ್ನು ಹಾಗೂ ಬೇಕಾಗುವ ಗ್ಲಾಮರಸ್ ಹುಡುಗಿಯರನ್ನು ಚಿತ್ರಕ್ಕೆ ಎಳೆದು ತಂದಿದ್ದಾರೆ. ಒಂದು ರೀತಿಯ ಎಂಜಾಯ್‌ಮೆಂಟ್ ಇಷ್ಟಪಡುವ ವರ್ಗಕ್ಕೆ ಫುಲ್ ಮಿಲ್ಸ್ ನೀಡಿಲ್ಲ. ಪ್ಲೇಟ್ ಮಿಲ್ಸ್ ತೃಪ್ತಿಪಡುವ ಮಂದಿಗೆ, ಇದು ಸೂಕ್ತ ಚಿತ್ರ ಎನ್ನಬಹುದು.

ಚಿತ್ರದ ಕಥೆಯಲ್ಲಿ ಏನು ಹೊಸತನವಿಲ್ಲ ಆದರೆ, ಚಿತ್ರದಲ್ಲಿ ನಾಯಕ ಸಚಿನ್ (ಧ್ಯಾನ್) ಟಿ.ವಿ. ವಾಹಿನಿಯೊಂದರ ಸ್ಟಾರ್ ನಿರೂಪಕ. ಆದರೆ, ಮಾಯಾಳ (ಸದಾ) ಪ್ರೀತಿಯಿಂದ ವಂಚಿತನಾದ ಭಗ್ನಪ್ರೇಮಿ. ಇನ್ನೂ ಅದೇ ವಾಹಿನಿ ನಿರೂಪಕಿಯಾಗಿ ನಾಯಕಿ ಸೋನಿಯಾ (ಲೇಖಾ ವಾಷಿಂಗ್ಟನ್), ಶ್ರೀಮಂತ ವ್ಯಕ್ತಿಯೊಬ್ಬನೊಡನೆ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಪ್ರಾರಂಭದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದು. ಅದರಲ್ಲೂ ನಾಯಕನಿಗೆ ಹುಡುಗಿಯರನ್ನು ಕಂಡರೆ ಉರಿದು ಬೀಳುವಷ್ಟು ಕೋಪ. ಆದರೂ ಅವರಿಬ್ಬರ ನಡುವೆ ಕುಚಿಕು ಕುಚಿಕು ಸ್ನೇಹ ಶುರುವಾಗಿ ದಿನಗಳದಂತೆ ಸ್ನೇಹದ ಗಾಢತೆ ಹೆಚ್ಚಾಗುತ್ತದೆ. ಇಬ್ಬರ ಮಧ್ಯೆ ಒಳಗೊಳಗೆ ಪ್ರೇಮಾಂಕುರ, ಆದರೆ, ಇದನ್ನು ಇಬ್ಬರೂ ಹೇಳಿಕೊಳ್ಳದೆ ಒದ್ದಾಡುತ್ತಾರೆ. ಕೊನೆಗೆ ನಾಯಕಿ ಮದುವೆ ಸಂದರ್ಭದಲ್ಲಿ ಮದುವೆ ಮನೆಯಿಂದ ಎಸ್ಕೆಪ್ ಆಗುತ್ತಾಳೆ. ಈ ಸಂಗತಿ ತೆರೆ ಸರಿಯುವ ಮುನ್ನ ಬೆಳಕಿಗೆ ಬರುತ್ತದೆ. ನಟಿ ಸದಾ ಕೆಲವೇ ಸೀನ್‌ಗಳಲ್ಲಿ ಬಂದು ಹೋಗಿದ್ದಾರೆ. ಇನ್ನೂ ಜೀರೋ ಸೈಜ್ ನಟಿ ಇಲಿಯಾನ ಹಾಡೊಂದಕ್ಕೆ ಮೈಕುಲುಕಿದ್ದಾರೆ ಅಷ್ಟೇ.

ಇಷ್ಟಕ್ಕೆ ಚಿತ್ರ ಮುಗಿಸುವುದು ಸರಿಯಲ್ಲ ಎಂದರಿತ ನಿರ್ದೇಶಕರು ಮಧ್ಯೆ ಮಧ್ಯೆ ಕೆಲವು ಕಾಮಿಡಿ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಶರಣ್ ಹಾಗೂ ರಂಗಾಯಣ ರಘು ಅವರದ್ದು. ರಂಗಾಯಣ ರಘು, ದಿ. ನಟ ಶಂಕರರನಾಗ್ ಅವರ ಧ್ವನಿಯನ್ನು ಅನುಕರಿಸಿ ಮಾತನಾಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಕೆಲವು ಟಿ.ವಿ. ಕಾರ್ಯಕ್ರಮಗಳು ಹಾಗೂ ಆಂಕರ್ಗಳನ್ನು ವಿಡಂಬಾತ್ಮಕವಾಗಿ ಚಿತ್ರೀಕರಿಸಿರುವುದು ಪ್ರೇಕ್ಷಕರಿಗೆ ಅಲ್ಲಲ್ಲಿ ಕಚಗುಳಿ ತರುತ್ತದೆ.

ಬೈನಿಕಾ ದೇಸಾಯಿ, ಸಂಜನಾ ಹಾಗೂ ಅನಿತಾ ಬಂದುಹೋಗುವ ಸನ್ನಿವೇಶ ಹಾಗೂ ಹಾಡಿ ದೃಶ್ಯದಿಂದ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಆಕರ್ಷಿಸುತ್ತಾರೋ, ಇದು ನಿರ್ಮಾಪಕರಿಗೆ ಎಷ್ಟರ ಮಟ್ಟಿಗೆ ಸಹಾಯಕ್ಕೆ ಬರುತ್ತೋ ಎನ್ನುವುದು ಪ್ರಶ್ನಾತೀತವಾಗಿದೆ.

ಆದರೆ, ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣ ಮಾಡಿದ ಧ್ಯಾನ್ ತಮ್ಮ ಸಹಜ ಅಭಿನಯದಲ್ಲಿ ಮಿಂಚಿದ್ದು, ಆದರೆ ಅವರ ಲಿಪ್ ಮೂವ್‌ಮೆಂಟ್ ನಿರ್ದೇಶಕರಿಗೆ ಮಾತ್ರ ಅರ್ಥವಾಗಬಹುದು. ಮಾಡೆಲ್ ಲೇಖಾ ಗ್ಲಾಮರಸ್ ಪ್ರಪಂಚವನ್ನು ಚಿತ್ರರಸಿಕರಿಗೆ ಪರಿಚಯಿಸಿದ್ದಾಳೆ ಸಿನಿಮಾ ಕಥೆಯನ್ನಲ್ಲ ಎನ್ನಬಹುದು. ಇನ್ನೂ ಸಾಧುಕೋಕಿಲ ಮುಂತಾದವರು ಇದ್ದಾರಷ್ಟೇ.

ಇದೆಲ್ಲಕ್ಕಿಂತ ಮಿಗಿಲಾಗಿ ಇಂದ್ರಜಿತ್ ಒಬ್ಬ ಉತ್ತಮ ಮ್ಯೂಸಿಕ್ ಕಂಪೋಸರ್ ಎನ್ನುವುದನ್ನು ನಿರೂಪಿಸಿದ್ದಾರೆ. ಅವರು ಕಂಪೋಸ್ ಮಾಡಿರುವ ಎರಡು ಹಾಡುಗಳ ಸಂಗೀತ ಅದ್ಬುತವಾಗಿದೆ. ಇವರ ಮುಂದೆ ಶ್ರೀಧರ್ ಸಪ್ಪೆಯಾಗಿ ಕಂಡುಬಂದಿದ್ದಾರೆ.

ಒಟ್ಟಾರೆಯಾಗಿ ಪ್ರೇಕ್ಷಕರು ಹಾಗು ಇಂದ್ರಜಿತ್ ಅಭಿಮಾನಿಗಳು ಏನನ್ನು ನೀರೀಕ್ಷಿಸದೆ ಚಿತ್ರ ನೋಡಿದರೆ, ಮಜಾ ಸಿಗುವುದಂತೂ ಖಂಡಿತ ಎನ್ನಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನೆಮಾ, ಸ್ಯಾಂಡಲ್ವುಡ್, ಹುಡುಗ ಹುಡುಗಿ