ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » ಕುಡುಕನ ಪ್ರೇಮ ಪುರಾಣ 'ಗನ್' (Gun | Harish Raj | Nikitha | Rangayana Raghu)
ನಿರ್ದೇಶಕ ಹರೀಶ್‌ ರಾಜ್ 'ಗನ್' ಚಿತ್ರದ ಬಹುಪಾಲು ಸಮಯವನ್ನು ಕುಡಿತದ ಸನ್ನಿವೇಶಗಳಿಗೆ ಮೀಸಲಿಟ್ಟು ಕುಡುಕರ ಸಿನಿಮಾ ತಯಾರಿಸಿದ್ದಾರೆ. ಕುಡಿತವನ್ನೇ ಸರ್ವಸ್ವವನ್ನಾಗಿಸಿಕೊಂಡು ಕಂಡ ಕಂಡವರನ್ನು ಯಾಮಾರಿಸಿ ದುಡ್ಡು ಕೀಳುವ ಯುವಕನ ಕಥೆಯನ್ನು ಹೊಂದಿರುವ 'ಗನ್', ಎಕೆ 47 ನಷ್ಟು ಪರಿಣಾಮಕಾರಿ ಅಲ್ಲದಿದ್ದರೂ ಸರಳವಾದ ಪಿಸ್ತೂಲಿನಷ್ಟು ಪ್ರಭಾವ ಬೀರುವ ಚಿತ್ರ.
PR

'ಕಲಾಕಾರ್' ಚಿತ್ರದ ಮೂಲಕ ನಿರ್ದೇಶಕನಾಗಿ, ನಾಯಕನಾಗಿ ಹರೀಶ್ ರಾಜ್ ಭರವಸೆ ಮೂಡಿಸಿದ್ದರು. ಆದರೆ 'ಕಲಾಕಾರ್'ನ ಗತ್ತುಗಾರಿಕೆ ಈ ಚಿತ್ರದಲ್ಲಿಲ್ಲ. ನಾಯಕನ ಪಾತ್ರದ ವೈಭವೀಕರಣಕ್ಕೆ ನೀಡಿದ ಮಹತ್ವವನ್ನು ಕಥೆಗೂ ನೀಡಿದ್ದಲ್ಲಿ 'ಗನ್' ಇನ್ನಷ್ಟು ಉತ್ತಮಗೊಳ್ಳುವ ಸಾಧ್ಯತೆ ಇತ್ತು. ಕಥೆ ಸೊರಗಿ ಹೋಗಿದ್ದರೂ ತಾಂತ್ರಿಕತೆಯ ಮೇಲ್ಮೆಯಿಂದಾಗಿ ಹಾಗೂ ಪಾತ್ರಗಳ ಪರಿಣಾಮಕಾರಿ ನಿರ್ವಹಣೆಯಿಂದಾಗಿ ಚಿತ್ರ ಒಂದಷ್ಟು ಗಮನ ಸೆಳೆಯುತ್ತದೆ.

ಯುವಕರಿಗೆ ಅಡ್ಡದಾರಿ ಹಿಡಿಯಬೇಡಿ ಎಂದು ತಿಳಿಸುವುದಕ್ಕೆ ನಿರ್ದೇಶಕರು ಗನ್ ಮೊರೆ ಹೋದಂತಿದೆ. ಜತೆಗೆ ಕುಡಿತದ ಟಚ್ ನೀಡಿದ್ದಾರೆ. ನಾಯಕನಾಗಿ ಹರೀಶ್ ರಾಜ್ 'ಇಂತಿ ನಿನ್ನ ಪ್ರೀತಿಯ' ಚಿತ್ರದ ನಾಯಕ ಶ್ರೀನಗರ ಕಿಟ್ಟಿ ಅವರನ್ನು ಕುಡಿತದಲ್ಲಿ ಹಿಂದಕ್ಕೆ ಹಾಕಿದವರಂತೆ ನಟಿಸಿದ್ದಾರೆ. ಕಾರ್ಪೊರೇಟರ್ ಪಾತ್ರದಲ್ಲಿ ನಟಿಸಿರುವ ರಂಗಾಯಣ ರಘು ಗಮನ ಸೆಳೆಯುತ್ತಾರೆ. ಇದು ರೀಮೇಕ್ ಚಿತ್ರವಲ್ಲ. ಹರೀಶ್ ರಾಜ್‌ರ ಸ್ವಂತ ಕಥೆ ಎಂಬುದೇ ಚಿತ್ರದ ಪ್ಲಸ್ ಪಾಯಿಂಟ್.

ಭಗ್ನಪ್ರೇಮಿ ನಾಯಕ ಕುಡಿತದ ದಾಸನಾಗುತ್ತಾನೆ. ಕುಡಿತದೊಂದಿಗೆ ಸ್ವಲ್ಪ ಒಳ್ಳೆಕೆಲಸವನ್ನು ಮಾಡುತ್ತಾನೆ. ಅದು ವರದಿಗಾರ್ತಿ ನಾಯಕಿಗೆ ಇಷ್ಟ ಆಗಿ, ಆಕೆ ಪ್ರೇಮಕ್ಕೆ ನಿವೇದಿಸಿದರೂ, ತನ್ನ ಹಳೆಯ ಪ್ರೇಮ ಕತೆಯನ್ನೆಲ್ಲ ಹೇಳಿ ನನ್ನನ್ನ ಪ್ರೀತಿಸಬೇಡ ಎನ್ನುತ್ತಾನೆ ನಾಯಕ. ಅಂತೂ ನಾಯಕಿಗೆ ಅವನ ಮೇಲಿನ ಪ್ರೀತಿ ಬಿಡುವುದೇ ಇಲ್ಲ. ಕೊನೆಗೆ ವಿಧಿಯಿಲ್ಲದೆ ನಾಯಕ ಒಪ್ಪಿಕೊಳ್ಳುತ್ತಾನೆ. ಮತ್ತೆ ಆಕೆ ಏನೇನೋ ತನಿಖಾ ವರದಿ ಮಾಡಿ ಇಕ್ಕಟ್ಟಿಗೆ ಸಿಲುಕಿದಾಗ ನಾಯಕ ಧಾವಿಸಿ.... ಮುಂದಿನ ಕಥೆಯಂತೂ ಮಾಮೂಲಿನಂತಿಲ್ಲ. ಆದರೂ ಒಮ್ಮೆ ನೋಡಬಹುದು.

ಚಿತ್ರವನ್ನು ಭಿನ್ನ ರೀತಿಯಲ್ಲಿ ನಿರೂಪಿಸುವ ಅವಕಾಶವನ್ನು ನಿರ್ದೇಶಕರು ಬಳಸಿಕೊಂಡಿಲ್ಲ ವಾದುದರಿಂದ ಚಿತ್ರ ಹಿಡಿತವಿಲ್ಲದೆ ಜಾಳು ಜಾಳಾಗಿ ಸಾಗುತ್ತದೆ. ರೋನಿ ರಾಫೆಲ್‌ರ ಸಂಗೀತ, ರಾಮಚಂದ್ರ-ವಿಷ್ಣುವರ್ಧನರ ಛಾಯಾಗ್ರಹಣ ಚಿತ್ರಕ್ಕೆ ಮೆರುಗು ನೀಡಿದೆ.
ಇವನ್ನೂ ಓದಿ