ಕಡ್ಡಿಪುಡಿ ಸಿನಿಮಾ ವಿಮರ್ಶೆ: ಕ್ಲಾಸ್-ಮಾಸ್ ಸೂಪರ್ ಬೆರಕೆ

ಶನಿವಾರ, 8 ಜೂನ್ 2013 (14:54 IST)

PR
ದುನಿಯಾ ಸೂರಿಗೆ ರೌಡಿಸಂ ಕಥೆ ಹೊಸತಲ್ಲ ಎನ್ನುವುದಕ್ಕಿಂತ ಅವರು ರೌಡಿಸಂ ಕಥೆ ಬಿಟ್ಟು ಆಚೆ ಬಂದದ್ದೇ ಕಡಿಮೆ ಎನ್ನುವುದು ಸೂಕ್ತ. ಆದರೆ ಈ ಬಾರಿ ಹೊರಗೆ ಬರುವಂತೆ ಹಲವರಿಗೆ ಸಂದೇಶ, ಒಳಗೆ ಹೋಗದಂತೆ ಸಲಹೆ ನೀಡಿದ್ದಾರೆ. ಭೂಗತ ಜಗತ್ತಿನ ಕಥೆಯೊಳಗೆ ಸಂಸಾರ ಕಟ್ಟಿದ್ದಾರೆ.

ಭೂಗತ ಜಗತ್ತಿಗೆ ಬರುವ ಪ್ರತಿಯೊಬ್ಬರದ್ದೂ ಆಕಸ್ಮಿಕವೇ ಆಗಿರುತ್ತದೆ. ಇಲ್ಲೂ ನಾಯಕ ಅದೇ ರೀತಿ ಎಂಟ್ರಿ ಪಡೆಯುತ್ತಾನೆ. ಆದರೆ ಹೊರ ಜಗತ್ತಿನಲ್ಲಿ ಬದುಕಿ ತೋರಿಸಲು ಹೊರಡುತ್ತಾನೆ. ಲಾಂಗುಗಳಿಲ್ಲದೆ ಬದುಕುವುದು ಯಾಕೆ ಸಾಧ್ಯವಿಲ್ಲ ಎಂದು ಪ್ರಯತ್ನಿಸುತ್ತಾನೆ. ಆದರೆ ಲಾಂಗುಗಳು ಬಿಡುವುದಿಲ್ಲ. ಈ ನಡುವೆ ಬಡ ಹುಡುಗಿಯ ಪ್ರವೇಶ. ಬದುಕು ಬದಲಾಗುತ್ತದೆ. ಕೊನೆಗೆ ಸಂದೇಶವೊಂದು ಬಿತ್ತರವಾಗುತ್ತದೆ. ಕಥೆ ಮುಗಿಯುವುದಿಲ್ಲ, ಅಲ್ಪವಿರಾಮ ಮಾತ್ರ.

ಸದಾ ಮಾಸ್ ಪ್ರೇಕ್ಷಕರನ್ನು ತಟ್ಟುತ್ತಿದ್ದ ಸೂರಿ ಈ ಬಾರಿ ಕ್ಲಾಸ್‌ಗೂ ಹೋಗಿದ್ದಾರೆ. ಪ್ರಬುದ್ಧ ಭಾವನೆಗಳು ಅವರ ನಿರೂಪನೆಯಲ್ಲಿ ಸ್ಫುರಿಸಿವೆ. ಕಲಾತ್ಮಕ ಮತ್ತು ಕಮರ್ಷಿಯಲ್ ಎರಡೂ ಚಿತ್ರಗಳನ್ನು ಸೇರಿಸಿ ಮಾಡಿದಂತಿದೆ. ಹಾಗಾಗಿ ಯಾರಿಗೇ ಆದರೂ ನಿರಾಸೆ ಅಥವಾ ಹೇವರಿಕೆ ಹುಟ್ಟುವ ಸಾಧ್ಯತೆಗಳು ಕಡಿಮೆ. ಶಿವರಾಜ್ ಕುಮಾರ್ ಅಭಿಮಾನಿಗಳಿಗಂತೂ ನಿರಾಸೆಯ ಮಾತೇ ಇಲ್ಲ. ಹಾಡುಗಳು, ಹೊಡೆದಾಟಗಳು ಬೊಂಬಾಟ್ ಆಗಿವೆ. ಕಿಕ್ ಕೊಡುವ ಸಂಭಾಷಣೆಗಳಿವೆ.ಇದರಲ್ಲಿ ಇನ್ನಷ್ಟು ಓದಿ :