ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಕ್ರೇಝಿಸ್ಟಾರ್‌ ರವಿಚಂದ್ರನ್‌
ತಾರಾ ಪರಿಚಯ
Feedback Print Bookmark and Share
 
ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಇನ್ನು ಒಂದು ರೀತಿಯ ಸಂಪ್ರದಾಯ ನಮ್ಮ ಚಿತ್ರರಂಗದಲ್ಲಿತ್ತು. ಯಶಸ್ವಿ ಪರಭಾಷಾ ಚಿತ್ರಗಳ ರಿಮೇಕ್ ಇಲ್ಲವೆ ಡಬ್ಬಿಂಗ್ ಸಂಪ್ರದಾಯ ಆಗ ನಮ್ಮ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟಿರಲಿಲ್ಲ.

ಕನ್ನಡ ಚಿತ್ರರಂಗಕ್ಕೆ ಯಶಸ್ವಿ ಪರಭಾಷಾ ಚಿತ್ರಗಳ ಭಟ್ಟಿ ಇಳಿಸುವಿಕೆಯ ಸಂಪ್ರದಾಯವನ್ನು ಹುಟ್ಟು ಹಾಕಿದ್ದೆ ಕ್ರೆಜಿಸ್ಟಾರ ರವಿಚಂದ್ರನ್ ದುರಾದೃಷ್ಟ ಅಂದರೆ ಅವರ ನಿರ್ಮಾಣದ ನಿರ್ಧೇಶನದ ಸ್ವಂತ ಕತೆಯನ್ನಾಧರಿಸಿದ ಒಂದೇ ಒಂದು ಚಿತ್ರ ಯಶಸ್ವಿ ಆಗಿಯೇ ಇಲ್ಲ. ಆದ್ದರಿಂದಲೊ ಏನೋ ಅವರು ನಿರ್ಮಾಪಕನಾಗಿ ನಿರ್ದೇಶಕನಾಗಿ ಪರಭಾಷಾ ಚಿತ್ರಗಳತ್ತ ಒಲವು ತೋರಿರಲು ಸಾಕು.

ರವಿಚಂದ್ರನ್ ನಟನಾಗಿ ಸಾಧಿಸಿದ್ದು ಕಡಿಮೆ ಎಂದರೆ ತಪ್ಪಾಗಲಿಕ್ಕಿಲ್ಲ ಎರಡು ದಶಕಗಳ ಅವಧಿಯಲ್ಲಿ ನಟನೆಗೆ ಸವಾಲು ಒಡ್ಡುವಂತಹ ಪಾತ್ರಗಳನ್ನು ಮಾಡಿಯೇ ಇಲ್ಲ.
ನಿರ್ಧೇಶಕನ ರೂಪದಲ್ಲಿಯ ರವಿಚಂದ್ರನ್ ಅವರನ್ನು ಕಡೆಗಣಿಸಲಿಕ್ಕೆ ಸಾದ್ಯವೇ ಇಲ್ಲ ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ಧೇಶನದ ಚಿತ್ರಗಳಲ್ಲಿ ಕಾಣಬಹುದು.

ಇನ್ನೊಂದು ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಸಂಗೀತ ಪ್ರತಿಯೊಂದು ಚಿತ್ರದಲ್ಲಿ ಹೊಸತು ಉದಾಹರಣೆಗೆ ಅವು ಮೊದಲ ನಿರ್ಧೇಶನದ ಚಿತ್ರ ಪ್ರೇಮಲೋಕದಿಂದ ಭಾರಿ ಯಶಸ್ಸು ಕಂಡ ರಾಮಾಚಾರಿ ತೆಗೆದುಕೊಳ್ಳಿ. 80ರ ದಶಕದಲ್ಲಿ ಪ್ರೇಮಲೋಕದ ಹಾಡುಗಳು ಚಿತ್ರಿಕರಣ ಕರ್ನಾಟಕದ ಮಟ್ಟಿಗೆ ಮೊದಲ ಪ್ರಯೋಗ ಕಥೆ ಮಾತ್ರ ಸಾಧಾರಣವಾದ ಪ್ರೇಮಕತೆ ಆದರೆ ಅದರಲ್ಲಿನ ಸೃಜನಾತ್ಮಕತೆ ಅಂದಿನ ದಿನಗಳಲ್ಲಿ ಬೆರಗು ಹುಟ್ಟಿಸುವಂತಹದು.

ಅದುನಿಕ ತಂತ್ರಜ್ಞಾನ ವಿದೇಶಗಳಲ್ಲಿ ಹಾಡುಗಳ ಚಿತ್ರಿಕರಣ ಕಾಲ ಪ್ರಾರಂಭವಾದ ಮೇಲೂ ರವಿಚಂದ್ರನ್ ರಾಮಾಚಾರಿಯ ಮೂಲಕ ಹಳ್ಳಿಯ ಸೋಗಡಿಗೆ ತಿರುಗಿ ಸಾಧಾರಣ ಭಾಷಾ ಸಾಹಿತ್ಯದ ಹಾಡುಗಳೊಂದಿಗೆ ಇಡಿ ಕತೆಯನ್ನು ಬಿಡಿಸಿಡುವ ಕಲೆಯಲ್ಲಿ ಅವರೊಬ್ಬರೆ ಪಾರಂಗತ.

ಈಶ್ವರ್, ಅಭಿಮಾನಿ, ಕನಸುಗಾರ, ಏಕಾಂಗಿ,ಮಲ್ಲ, ಮನೆದೇವ್ರು,ರಾಮಾಚಾರಿ,ಸ್ವಾಭಿಮಾನಿ, ಯುಗಪುರುಷ, ಯುದ್ದಕಾಂಡ, ಸ್ವಾಭಿಮಾನ,ಶಾಂತಿಕ್ರಾಂತಿ, ರಣಧೀರ,ಅಂಜದ ಗಂಡು ಪ್ರೇಮಲೋಕ ಮುಂತಾದ ಚಿತ್ರಗಳಲ್ಲಿ ಭಾರಿ ಯಶಸ್ಸು ಅಂದರೆ ಪ್ರೇಮಲೋಕ ಹಾಗೂ ರಾಮಾಚಾರಿಯದ್ದು,

ರಣಧೀರ, ಅಂಜದ ಗಂಡು,ಯುಗಪುರುಷ, ಯುದ್ದಕಾಂಡಗಳು ಯಶಶ್ವಿ ಚಿತ್ರಗಳ ಸಾಲಿನಲ್ಲಿ ಸೇರಿದರೆ ಇನ್ನುಳಿದವುಗಳು ತೋಪಾಗಿದ್ದೆ ಹೆಚ್ಚು. ಇನ್ನೊಂದು ವಿಶೇಷ ಅಂದರೆ ಸ್ವಂತ ಕಥಾವಸ್ತು ಉಳ್ಳ ಅವರ ನಿರ್ಧೇಶನದ. ನಟನೆಯ ಎಲ್ಲ ಚಿತ್ರಗಳು ವಿಫಲಗೊಂಡಿದ್ದು ವಿಪರ್ಯಾಸ.