ರಮೇಶ ಅಂದರೆ ಸದಭಿರುಚಿಯ ಕೌಟುಂಬಿಕ ಚಿತ್ರ. ರಮೇಶ ಚಿತ್ರದಲ್ಲಿ ಕೀಳು ಅಭಿರುಚಿಗೆ ಅವಕಾಶವೇ ಇಲ್ಲ ಇಡಿ ಕುಟುಂಬ ಒಟ್ಟಿಗೆ ಕುಳಿತು ನೋಡಬಹುದು.
ತಮಿಳು ಚಿತ್ರರಂಗದ ಹಿರಿಯ ನಿರ್ಧೇಶಕ ಕೆ ಬಾಲಚಂದರ್ ಅವರ ಸುಂದರ ಸ್ವಪ್ನಗಳು ಚಿತ್ರದಲ್ಲಿ ನಟಿಸುವ ಮೂಲಕ ರಮೇಶ ಬಣ್ಣದ ಲೋಕಕ್ಕೆ ಕಾಲಿಟ್ಟರು.
ಶ್ರೀಗಂಧ, ಪಂಚಮವೇದ, ಅರಗಿಣಿಯ ಯಶಸ್ಸನ್ನು ಕನ್ನಡ ಚಿತ್ರರಂಗದ ನಿರ್ಮಾಪಕರು ಲೆಕ್ಕಕ್ಕೆ ತೆಗೆದುಕೊಳ್ಳಲೆ ಇಲ್ಲ.ಸುಮಾರು ವರ್ಷಗಳ ಕಾಲ ತಮಿಳು, ತೆಲುಗು ಚಿತ್ರರಂಗಗಳತ್ತ ವಲಸೆ ಹೋದ ಅಲ್ಲಿ ಭಾರಿ ಯಶ ಸಾಧಿಸಲು ಪ್ರಾರಂಭಿಸಿದ ಮೇಲೆಯೇ ನಮ್ಮವರ ಕಣ್ಣು ರಮೇಶರತ್ತ ತಿರುಗಿದ್ದು, ಅಲ್ಲಿಯವರೆಗೂ ರಮೇಶ ಎಂಬ ಅದ್ಬುತ ನಟನ ಪರಿಚಯ ನಮಗೆ ಆಗಿತ್ತು ಆದರೂ ಅನಾವರಣಗೊಂಡಿರಲಿಲ್ಲ.
ತೆಲುಗಿನಲ್ಲಿ ಲಿಟಲ್ ಸೊಲ್ಜರ್ಸ್, ರುದ್ರವೀಣಾ, ಸತಿ ಲಿಲಾವತಿ ಮುಂತಾದ ಯಶಸ್ವಿ ಚಿತ್ರಗಳನ್ನು ರಮೆಶ ನೀಡಿದ್ದಾರೆ.ಲಿಟಲ್ ಸೊಲ್ಜರ್ಸ್ ಚಿತ್ರದಲ್ಲಿನ ಅಭಿನಯಕ್ಕಾಗಿ ಆಂಧ್ರದ ನಂದಿ ಪ್ರಶಶ್ತಿಯೂ ಅವರಿಗೆ ಲಭಿಸಿದೆ.
ತಮೀಳು ಚಿತ್ರರಂಗದಲ್ಲಿ ರಮೇಶ ಅರವಿಂದ ಎಂದು ಹೆಸರು ಪಡೆದ ಇವರು ಕೆಲಾಡಿ ಕನ್ಮಣಿ ಮತ್ತು ಡ್ಯುಯೆಟ್‌ಗಳಂತಹ ಭಾರಿ ಯಶಸ್ಸಿನ ಚಿತ್ರಗಳು ಅವರ ಖಾತೆಯಲ್ಲಿ ಜಮೆಯಾದ ನಂತರ ಪುನಃ ಕನ್ನಡ ಚಿತ್ರರಂಗದ ನಂಟು ಬೆಳೆಯಿತು.
ತವರಿಗೆ ಮರಳಿದ ನಂತರ ರಮೇಶ ನಟಿಸಿದ ಚಿತ್ರಗಳಲ್ಲಿ 9 ಚಿತ್ರಗಳು ಸಾಲಾಗಿ ಶತದಿನೋತ್ಸವ ಆಚರಿಸಿದ್ದು ಇನ್ನು ಧಾಖಲೆಯಾಗಿದೆ.ಅವುಗಳಲ್ಲಿ ಅನುರಾಗ ಸಂಗಮ, ಉಲ್ಟಾ ಪಲ್ಟಾ, ತುತ್ತಾ ಮುತ್ತಾ, ಚಂದ್ರಮುಖಿ ಪ್ರಾಣಸಖಿ, ಗೊಂಬೆ, ನಮ್ಮೂರ ಮಂದಾರ ಹೂವೇ, ಹೂಮಳೆ, ದೀಪಾವಳಿ, ಮತ್ತು ಸ್ನೆಹಲೋಕ, ರಾಮ ಶ್ಯಾಮ ಭಾಮ ಪ್ರಮುಖವಾದವುಗಳು.
1997ರಲ್ಲಿ ಅಮೆರಿಕಾ ಅಮೆರಿಕಾ, ಮತ್ತು 1999ರಲ್ಲಿ ಹೂಮಳೆ ಚಿತ್ರದಲ್ಲಿನ ಶ್ರೇಷ್ಟ ಅಭಿನಯಕ್ಕಾಗಿ ರಾಜ್ಯಪ್ರಶಸ್ತಿ ಇವರಿಗೆ ಲಭಿಸಿದೆ.1997ಮತ್ತು 99ರಲ್ಲಿ ಫಿಲ್ಮ್ ಪೇರ್ ಪ್ರಶಸ್ತಿ ಲಭಿಸಿದೆ.ಚಿತ್ರರಂಗದಲ್ಲಿ ರಮೇಶ ಕೇವಲ ನಟನೆಗೆ ಅಷ್ಟೆ ಸಿಮಿತವಾಗಿ ಉಳಿದಿಲ್ಲ.
1997ರಲ್ಲಿ ಅತ್ಯುತ್ತಮ ಚಿತ್ರ ಎಂದು ರಾಷ್ಟ್ರಪ್ರಶಸ್ತಿ ಪಡೆದ ಹೂಮಳೆ ಚಿತ್ರದ ಕಥೆ ಮತ್ತು ಚಿತ್ರಕಥೆ ಇವರದ್ದೆ. ಈಗಾದರೂ ಗೊತ್ತಾಯಿತಾ ರಮೇಶ ಅಂದರೆ ಎನು ಅಂತ......