ಹಿರಿಯ ರಂಗಕರ್ಮಿ ಸಿ.ಆರ್.ಸಿಂಹ ಅವರಿಗೆ ಎಪ್ಪತ್ತನೇ ಜನುಮದಿನ. ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಈ ಮೂರು ಕ್ಷೇತ್ರಗಳಲ್ಲೂ ಕೆಲಸ ಮಾಡಿದವರು ಖ್ಯಾತ ಕಲಾವಿದ ಸಿ. ಆರ್. ಸಿಂಹ. 1942 ಜೂನ್ 16ರಂದು ಚನ್ನಪಟ್ಟಣದಲ್ಲಿ ಜನಿಸಿದ ಸಿಂಹ ಅವರ ತಂದೆ ರಾಮಸ್ವಾಮಿ ಶಾಸ್ತ್ತ್ರಿ. ತಾಯಿ ಲಲಿತಮ್ಮ.
ಕನ್ನಡದ ಬಹಳಷ್ಟು ಚಿತ್ರಗಳಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ ಕಲಾವಿದ ಸಿಂಹ 'ಒಥೆಲೋ', 'ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ಮುಂತಾದ ನಾಟಕಗಳನ್ನು, 'ಕಾಕನ ಕೋಟೆ', 'ಶಿಕಾರಿ', 'ಅಶ್ವಮೇಧ', 'ಅಂಗೈಯಲ್ಲಿ ಅಪ್ಸರೆ' ಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.
'ತುಘಲಕ್' ಸಿಂಹ ಅವರಿಗೆ ತುಂಬ ಖ್ಯಾತಿಯನ್ನು ತಂದುಕೊಟ್ಟ ನಾಟಕ.
'ಕಾಕನಕೋಟೆ' ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಜೊತೆಗೆ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪುರಸ್ಕಾರ, ಗೌರವಗಳು ಅವರಿಗೆ ದೊರೆತಿವೆ.
ಸಿ.ಆರ್.ಸಿಂಹ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳನ್ನು ನೀವೂ ಹಾರೈಸಿ....