ನವದೆಹಲಿ: ರವಿವಾರದಂದು ಬಿಜೆಪಿ ನಮೋ ಚಾಹ ಪಾರ್ಟಿ ಆಯೊಜಿಸಿತ್ತು. ಇದರಲ್ಲಿ ಸಾಮಾನ್ಯ ಜನರು ಮತ್ತು ಬಿಜೆಪಿಯ ನಾಯಕರ ಮಾತು ಕತೆ ಮತ್ತು ನರೇಂದ್ರ ಮೋದಿಯವರ ಸಂದೇಶ ನೀಡಲಾಯಿತು. ಈ ಚಹಾ ಪಾರ್ಟಿಯಲ್ಲಿ ಜನರ ಜೊತೆ ಮಾತುಕತೆ ನಡೆಯಿತು ಮತ್ತು ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರ ಪ್ರಚಾರ ಮಾಡಲಾಯಿತು ಎಂದು ಬಿಜೆಪಿಯ ಮುಖಂಡರು ತಿಳಿಸಿದ್ದಾರೆ