ಕೂದಲು ಉದ್ದವಾಗಿ ಬೆಳೆಯಲು ವಾರದಲ್ಲಿ 3 ಬಾರಿ ಈ ಎಣ್ಣೆಯನ್ನು ಹಚ್ಚಿ

ಬೆಂಗಳೂರು| pavithra| Last Modified ಭಾನುವಾರ, 2 ಮೇ 2021 (06:47 IST)
ಬೆಂಗಳೂರು : ಉದ್ದವಾದ, ದಪ್ಪವಾದ ಕೂದಲು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದಕಾರಣ ಶಾಂಪೂ ಮಾಡುವ ಮುನ್ನ ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಕೂದಲು ದಪ್ಪವಾಗಿ ಬೆಳೆಯುತ್ತದೆ. ಹಾಗಾಗಿ ನೀವು ಈ‍ ಎಣ್ಣೆಯನ್ನು ತಯಾರಿಸಿ ಕೂದಲಿಗೆ ಹಚ್ಚಿ.

ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಮೆಂತ್ಯ ಬೀಜವನ್ನು ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಅದನ್ನು 5 ನಿಮಿಷ ಕುದಿಸಿ ಅದು ಕಪ್ಪು ಬಣ್ಣಕ್ಕೆ ಬಂದಾಗ ಅದನ್ನು ತಣ್ಣಗಾಗಿಸಿ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ಹಲವು ದಿನಗಳ ಕಾಲ ಬಳಸಬಹುದು.

ಈ ಎಣ್ಣೆಯನ್ನು ಕೂದಲು ವಾಶ್ ಮಾಡುವ 2 ಗಂಟೆಯ ಮೊದಲು  ಕೂದಲಿಗೆ ಹಚ್ಚಿ. ಇದನ್ನು ವಾರದಲ್ಲಿ 3 ಬಾರಿ ಬಳಸಿದರೆ ನಿಮ್ಮ ಕೂದಲು ದಪ್ಪವಾಗಿ ಉದ್ದವಾಗಿ ಬೆಳೆಯುತ್ತದೆ.ಇದರಲ್ಲಿ ಇನ್ನಷ್ಟು ಓದಿ :