ಪ್ರಾಣಾಯಾಮ ಮಾಡುವುದರ ಮುಖ್ಯ ಉಪಯೋಗಗಳು ಏನು ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 4 ಜೂನ್ 2020 (09:54 IST)
ಬೆಂಗಳೂರು: ಪ್ರಾಣಾಯಾಮ ಮಾಡುವುದನ್ನು ಹೆಚ್ಚಿನವರು ರೂಢಿ ಮಾಡಿಕೊಂಡಿರುತ್ತೇವೆ. ಇದರ ಮುಖ್ಯ ಉಪಯೋಗಗಳು ಏನು ಗೊತ್ತಾ?

 
ಹೆಚ್ಚಾಗಿ ಶೀತ ಸಂಬಂಧೀ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಪ್ರಾಣಾಯಾಮ ಮಾಡುವುದರಿಂದ ಆರೋಗ್ಯವಾಗಿರಬಹುದು.
 
ಏಕಾಗ್ರತೆ ಕೊರತೆ, ಓದಿನಲ್ಲಿ ಗಮನ ಹರಿಸಲು ಸಾಧ‍್ಯವಾಗದೇ ಇರುವವರು, ಖಿನ್ನತೆ, ಮಾನಸಿಕ ಒತ್ತಡದಿಂದ ಬಳಲುತ್ತಿರುವವರಿಗೆ ಪ್ರಾಣಾಯಾಮ ಪರಿಣಾಮಕಾರಿ. ಇದರಿಂದ ದಿನವಿಡೀ ಉಲ್ಲಸಿತರಾಗಿರಬಹುದು.
 
ಉಸಿರಾಟ ಸಂಬಂಧೀ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಪ್ರಾಣಾಯಾಮ ಉಪಕಾರಿ. ಇದರಿಂದ ನಮ್ಮ ಶ್ವಾಸಕೋಶವೂ ಆರೋಗ್ಯವಾಗಿರುತ್ತದೆ.
ಇದರಲ್ಲಿ ಇನ್ನಷ್ಟು ಓದಿ :