ಲೈಂಗಿಕ ಶಕ್ತಿ ಹೆಚ್ಚಾಗಲು ಇದನ್ನು ತಪ್ಪದೇ ಮಾಡಿ

love hate story
ಬೆಂಗಳೂರು| Jagadeesh| Last Updated: ಮಂಗಳವಾರ, 12 ನವೆಂಬರ್ 2019 (13:30 IST)
ಹೊಸದಾಗಿ ಮದುವೆಯಾದಾಗ ಇದ್ದಂತಹ ಲೈಂಗಿಕ ಆಸಕ್ತಿ ಕುಗ್ಗುತ್ತಿದೆಯೇ? ಲೈಂಗಿಕ ತುಡಿತ ಹೆಚ್ಚಿಸಿಕೊಳ್ಳಬೇಕೆಂದು ನಾನಾ ಕಸರತ್ತು ಮಾಡುತ್ತಿರುವಿರಾ? ಹಾಗಿದ್ರೆ ಇದನ್ನು ಪಾಲಿಸಿ ನೋಡಿ.
 
 

ಯಾವುದೇ ಮಾತ್ರೆಗಳನ್ನು ನುಂಗುತ್ತಿದ್ದರೆ ಬಿಟ್ಟುಬಿಡಿ.  ಹದಿನೈದು ದಿನಗಳ ಕಾಲ ಒಂದು ಗ್ಲಾಸ್ ದಾಳಿಂಬೆ ಹಣ್ಣಿನ ರಸ ಕುಡಿಯಿರಿ, ಮುಂದೆ ಏನಾಗುತ್ತದೆಂದು ನೋಡಿ.


ಎಡಿನ್‌ಬರ್ಗ್‌ನಲ್ಲಿರುವ ಕ್ವೀನ್ ಮಾರ್ಗರೆಟ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನದ ಪ್ರಕಾರ, 15 ದಿನಗಳ ಕಾಲ ಪ್ರತಿದಿನ, ಗಂಡಸು ಅಥವಾ ಹೆಂಗಸರು ರಾತ್ರಿ ಒಂದು ಗ್ಲಾಸ್ ತಾಜಾ ದಾಳಿಂಬೆ ಹಣ್ಣಿನ ರಸ ಹೀರಿದರೆ, ಟೆಸ್ಟೋಸ್ಟಿರಾನ್ ಹಾರ್ಮೋನ್ ಚಟುವಟಿಕೆ ಜಾಸ್ತಿಯಾಗುತ್ತದೆ. ಅದರಿಂದ ಲೈಂಗಿಕ ಆಸಕ್ತಿ ತಾನಾಗಿಯೇ ಅರಳುತ್ತದಂತೆ.ಹದಿಹರೆಯದವರು ಮಾತ್ರವಲ್ಲ, ಅರವತ್ತು ವಯಸ್ಸು ಮೀರಿದವರೂ ಕೂಡ ದಾಳಿಂಬೆ ಹಣ್ಣಿನ ರಸದಿಂದ ಬಾಳನ್ನು ಸರಸಮಯವಾಗಿಸಿಕೊಳ್ಳಬಹುದು. ಸುಮಾರು ಹದಿನೈದು ದಿನಗಳ ಕಾಲ ನಡೆಸಿದ ಅಧ್ಯಯನದಿಂದ ಪುರುಷ ಮತ್ತು ಮಹಿಳೆಯರಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್ ಉತ್ಪತ್ತಿಯಾಗುವುದು ಜಾಸ್ತಿಯಾಗಿರುವುದು ಕಂಡು ಬಂದಿದೆಯಂತೆ.

 
 
 
ಇದರಲ್ಲಿ ಇನ್ನಷ್ಟು ಓದಿ :