ಮುಖದ ಹೊಳಪು ಹೆಚ್ಚಾಗಲು ಮಾವಿನ ಹಣ್ಣಿನ ಫೇಸ್ ಪ್ಯಾಕ್ ಗೆ ಇದನ್ನು ಬೆರೆಸಿ

ಬೆಂಗಳೂರು| pavithra| Last Modified ಸೋಮವಾರ, 21 ಡಿಸೆಂಬರ್ 2020 (08:09 IST)
ಬೆಂಗಳೂರು : ಮಾವಿನ ಹಣ್ಣನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಇದು ರುಚಿಕರವಾಗಿ ಸಿಹಿಯಾಗಿರುತ್ತದೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗೇ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಇದನ್ನು ಮುಖಕ್ಕೆ ಹಚ್ಚಿದರೆ ಮುಖದ ಹೊಳಪು ಹೆಚ್ಚಾಗುತ್ತದೆ.
ಒಂದು ಹಣ್ಣಾದ ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಂಡು ಅದಕ್ಕೆ 2 ಚಮಚ ರೋಸ್ ವಾಟರ್ ಹಾಗೂ ಕೆಲವು ಹನಿಗಳಷ್ಟು ನಿಂಬೆ ರಸವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 30 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದು ಚರ್ಮದಲ್ಲಿನ ಕಂದು ಬಣ್ಣವನ್ನು ನಿವಾರಿಸಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಇದನ್ನು ಪ್ರತಿದಿನ ಹಚ್ಚಬಹುದು.>


ಇದರಲ್ಲಿ ಇನ್ನಷ್ಟು ಓದಿ :