ವಾರದ ಯಾವ ದಿನ ಮಿಲನ ಕ್ರಿಯೆ ಮಾಡುವುದು ಸೂಕ್ತ?

ಬೆಂಗಳೂರು| Krishnaveni K| Last Modified ಸೋಮವಾರ, 19 ಆಗಸ್ಟ್ 2019 (08:48 IST)
ಬೆಂಗಳೂರು: ರೊಮ್ಯಾನ್ಸ್ ಮಾಡೋದಿಕ್ಕೂ ಸಮಯ, ಮುಹೂರ್ತ ಎಲ್ಲಾ ನೋಡಬೇಕಾ? ಹೌದು, ಎಂದಿದ್ದಾರೆ ಬ್ರಿಟನ್ ನ ಅಧ್ಯಯನಕಾರರು. ಅಷ್ಟೇ ಅಲ್ಲ, ಯಾವ ದಿನ ಸೂಕ್ತ ಎಂದು ಸಮೀಕ್ಷೆ ನಡೆಸಿ ಫಲಿತಾಂಶ ಹೊರಹಾಕಿದ್ದಾರೆ.

 
ಸುಮಾರು 20,000 ಕ್ಕೂ ಅಧಿಕ ಮಂದಿಯನ್ನು ಸಮೀಕ್ಷೆ ನಡೆಸಿ ಸಮೀಕ್ಷಕರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಇವರಲ್ಲಿ ಹೆಚ್ಚಿನವರು ಭಾನುವಾರ ಮಿಲನ ಕ್ರಿಯೆ ಮಾಡಲು ಸೂಕ್ತ ದಿನ ಎಂದಿದ್ದಾರಂತೆ. ಅದೂ, ರಾತ್ರಿ 9 ಗಂಟೆಯ ಆಸುಪಾಸಿನ ಅವಧಿ ಸಂಭೋಗಕ್ಕೆ ಸೂಕ್ತ ಸಮಯ ಎಂದು ಮುಹೂರ್ತ ಕೊಟ್ಟಿದ್ದಾರೆ! ಸಮೀಕ್ಷಕರ ಪ್ರಕಾರ ಎರಡನೇ ಸ್ಥಾನ ಸಿಕ್ಕಿರುವುದು ಶನಿವಾರಕ್ಕೆ. ಉಳಿದ ವಾರಗಳ ಬಗ್ಗೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಮಂದಿ ಆಸಕ್ತಿ ತೋರಿಲ್ಲವಂತೆ.
ಇದರಲ್ಲಿ ಇನ್ನಷ್ಟು ಓದಿ :