ಸ್ತನದ ಗಾತ್ರ ಚಿಕ್ಕದು ಎಂದು ಗೆಳತಿಯರು ಹಾಸ್ಯ ಮಾಡ್ತಾರೆ!

ಬೆಂಗಳೂರು| Krishnaveni K| Last Modified ಶನಿವಾರ, 17 ಆಗಸ್ಟ್ 2019 (10:05 IST)
ಬೆಂಗಳೂರು: ಹದಿ ಹರೆಯಕ್ಕೆ ಕಾಲಿಟ್ಟ ಹೆಚ್ಚಿನ ಯುವತಿಯರಿಗೆ ಕಾಡುವ ಸಮಸ್ಯೆಯೇ ಇದು. ಸಿನಿಮಾ, ಸುಂದರ ಯುವತಿಯರ ಚಿತ್ರ ನೋಡಿ ಅವರಂತೇ ತನ್ನ ದೇಹ ಗಾತ್ರವಿಲ್ಲ ಎಂದು ಕೀಳರಿಮೆಪಟ್ಟುಕೊಳ್ಳುವುದು.
 

ಅದರಲ್ಲೂ ವಿಶೇಷವಾಗಿ, ತನ್ನ ಸ್ತನಗಳ ಗಾತ್ರ ಚಿಕ್ಕದು ಎಂಬ ಕೀಳರಿಮೆ ಹೊಂದಿರುತ್ತಾರೆ. ಇದರಿಂದ ಗೆಳೆತಿಯರು ನನ್ನನ್ನು ಹಾಸ್ಯ ಮಾಡುತ್ತಾರೆ. ಇದರಿಂದಾಗಿ ನನಗೆ ದೇಹ ಸೌಂದರ್ಯವಿಲ್ಲ ಎಂಬಿತ್ಯಾದಿ ಕೊರಗು ಕಾಡುತ್ತದೆ.
 
ಶರೀರದ ಎಲ್ಲಾ ಭಾಗಗಳ ಬೆಳವಣಿಗೆ ನಮ್ಮ ದೇಹ ತೂಕ, ಅನುವಂಶಿಕ ಗುಣಗಳು, ನಾವು ತೆಗೆದುಕೊಳ್ಳುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ಎಲ್ಲವೂ ಸರಿಯಾಗಿದ್ದರೂ ಸ್ತನಗಳ ಗಾತ್ರ ಚಿಕ್ಕದಾಗಿದೆ ಎನಿಸಿದರೆ ಅದಕ್ಕೆ ಬೇಕಾದ ವ್ಯಾಯಾಮ, ಸ್ಕಿಪ್ಪಿಂಗ್ ನಂತಹ ದೈಹಿಕ ಚಟುವಟಿಕೆ ಮಾಡಬಹುದು. ನೆನಪಿಡಿ, ಇದಕ್ಕೆ ಯಾವುದೇ ಔಷಧಿ, ಕ್ರೀಂಗಳ ಬಳಕೆ ಮಾಡಲು ಹೋಗಬೇಡಿ.
ಇದರಲ್ಲಿ ಇನ್ನಷ್ಟು ಓದಿ :