Widgets Magazine

ಪಾಕಿಸ್ತಾನದಲ್ಲಿ ಮೊದಲಬಾರಿಗೆ ಪೊಲೀಸ್ ಅಧಿಕಾರಿಯಾಗಿ ಹಿಂದೂ ಮಹಿಳೆ ಆಯ್ಕೆ

ಪಾಕಿಸ್ತಾನ| pavithra| Last Updated: ಗುರುವಾರ, 5 ಸೆಪ್ಟಂಬರ್ 2019 (09:44 IST)
: ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಹಿಂದು ಮಹಿಳೆಯೊಬ್ಬಳು ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಪುಷ್ಪಾ ಎನ್ನುವವರು  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಆಗಿ ನೇಮಿಸಲಾಗಿದೆ. ಈ ವಿಚಾರವನ್ನು ಮಾನವಹಕ್ಕುಗಳ ಕಾರ್ಯಕರ್ತ ಕಪಿಲ್ ದೇವ್ ಮಂಗಳವಾರ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಈ ಹಿಂದೆ ಪಾಕಿಸ್ತಾನಿ ಹಿಂದೂ ಮಹಿಳೆ ಸುಮನ್ ಪವನ್ ಬೊಡಾನಿಯನ್ನು ಜನವರಿಯಲ್ಲಿ ಸಿವಿಲ್ ಮತ್ತು ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶೆಯಾಗಿ ನೇಮಿಸಲಾಗಿತ್ತು. ಇದೀಗ ಹಿಂದು ಮಹಿಳೆಯೊಬ್ಬಳು ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದು, ಪಾಕಿಸ್ತಾನದಲ್ಲಿ ವಾಸಿಸುತ್ತಿರುವ 75 ಲಕ್ಷ ಹಿಂದೂಗಳಿಗೆ ಖುಷಿ ನೀಡಿದೆ ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :