ಮೆಕ್ಸಿಕೊದಲ್ಲಿ ಮತ್ತೆ ಕಾಣಿಸಿಕೊಂಡ ಭೂಕಂಪ; 7.2 ತೀವ್ರತೆ ದಾಖಲು

ಮೆಕ್ಸಿಕೊ| pavithra| Last Modified ಶನಿವಾರ, 17 ಫೆಬ್ರವರಿ 2018 (12:56 IST)
ಮೆಕ್ಸಿಕೊ ಸಿಟಿ: ಆಗ್ನೇಯ ಮೆಕ್ಸಿಕೊ ದಲ್ಲಿ ಶುಕ್ರವಾರ ತಡರಾತ್ರಿ ಪ್ರಬಲ ಸಂಭವಿಸಿದ್ದು ರಿಕ್ಟರ್‌ ಮಾಪಕದಲ್ಲಿ 7.2 ತೀವ್ರತೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಮೆಕ್ಸಿಕೊದ ಹಲವು ರಾಜ್ಯಗಳಲ್ಲಿ ಕಂಪನದ ಅನುಭವವಾಗಿದ್ದು ಜನರು ಭಯಭೀತರಾಗಿರುವ ಬಗ್ಗೆ ವರದಿಯಾಗಿದೆ.


ಹಲವು ಕಟ್ಟಡಗಳಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದು ಇದುವರೆಗೆ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.


ಕಳೆದ ವರ್ಷ ಸೆಪ್ಟಂಬರ್‌ 7 ರಂದು ಮೆಕ್ಸಿಕೊದಲ್ಲಿ ಸಂಭವಿಸಿದ 8.2 ತೀವ್ರತೆಯ ಭೂಕಂಪದಲ್ಲಿ 96 ಮಂದಿ ಸಾವನ್ನಪ್ಪಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :