ಬ್ರಿಟನ್‌ನಲ್ಲೂ ಮೊಳಗಿದ ನರೇಂದ್ರ ಮೋದಿ ವಿಜಯೋತ್ಸವ

ಲಂಡನ್‌| Rajesh patil| Last Modified ಭಾನುವಾರ, 18 ಮೇ 2014 (13:40 IST)
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಜಯ ಸಾಧಿಸಿರುವುದರಿಂದ ಇಲ್ಲಿಯ ಬಿಜೆಪಿ ಬೆಂಬಲಿಗರು ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಂಭ್ರಮಿಸಿದರು.
ಲಂಡನ್, ಕಾರ್ಡಿಫ್, ಲೀಡ್ಸ್‌, ಬರ್ಮಿಂಗ್‌ಹ್ಯಾಮ್ ಮತ್ತು ಲೈಸಿಸ್ಟರ್ ನಗರಗಳಲ್ಲಿ ಚುನಾವಣೆ ಫಲಿತಾಂಶವನ್ನು ವಾಹಿನಿಗಳಲ್ಲಿ ವೀಕ್ಷಿಸುತ್ತಿದ್ದ ಬಿಜೆಪಿ ಬೆಂಬಲಿಗರು ಅಲ್ಲೇ ಕಾರ್ಯಕ್ರಮ ಏರ್ಪಡಿಸಿ ಸಂಭ್ರಮಪಟ್ಟರು.
ಕ್ವೀನ್ಸ್‌ಬರಿ ಪ್ರದೇಶದ ಭಾರತೀಯ ಹೋಟೆಲ್‌ವೊಂದರಲ್ಲಿ ಭಾರತೀಯರು ಅದರಲ್ಲೂ ಗುಜರಾತಿ ಮೂಲದ ಬಿಜೆಪಿ ಬೆಂಬಲಿಗರು ಕಿಕ್ಕಿರಿದು ಸೇರಿದ್ದರು. ಹಾಡು, ನೃತ್ಯ, ಘೋಷಣೆಯ ಮೂಲಕ ವಿಜಯೋತ್ಸವ ಆಚರಿಸಿದರು.

ಬ್ರಿಟನ್‌ಗೆ ಅಧಿಕೃತ ಭೇಟಿ ನೀಡುವಂತೆ ಪ್ರಧಾನಿ ಡೆವಿಡ್ ಕ್ಯಾಮೆರಾನ್ ಅವರು ಮೋದಿ ಅವರನ್ನು ಆಹ್ವಾನಿಸಿರುವುದನ್ನು ಭಾರತೀಯ ಸಂಜಾತರು ಮೆಚ್ಚಿದ್ದಾರೆ.
.ಇದರಲ್ಲಿ ಇನ್ನಷ್ಟು ಓದಿ :