ಚಾಲೆಂಜ್ ಗಾಗಿ 1.5 ಲೀಟರ್ ವೋಡ್ಕಾ ಸೇವಿಸಿ ಪ್ರಾಣ ಕಳೆದುಕೊಂಡ!

ಮಾಸ್ಕೋ| Krishnaveni K| Last Modified ಶನಿವಾರ, 6 ಫೆಬ್ರವರಿ 2021 (09:08 IST)
ಮಾಸ್ಕೋ: ರಷ್ಯಾ ಮೂಲದ ವ್ಯಕ್ತಿಯೊಬ್ಬ ಚಾಲೆಂಜ್ ಗಾಗಿ ಯೂ ಟ್ಯೂಬ್ ಲೈವ್ ನಲ್ಲಿ 1.5 ಲೀಟರ್ ವೋಡ್ಕಾ ಸೇವಿಸಿ ಎಲ್ಲರೂ ನೋಡುತ್ತಿರುವಂತೇ ಸಾವನ್ನಪ್ಪಿದ ಘಟನೆ ನಡೆದಿದೆ.
 > ಎಷ್ಟು ಲೀಟರ್ ವೋಡ್ಕಾ ಸೇವಿಸಬಹುದು ಎಂಬ ಚಾಲೆಂಜ್ ನಲ್ಲಿ ಪಾಲ್ಗೊಂಡ 60 ವರ್ಷದ ವ್ಯಕ್ತಿ 1.5 ಲೀ. ವೋಡ್ಕಾ ಸೇವಿಸುತ್ತಿದ್ದಂತೇ ಪ್ರಾಣ ಕಳೆದುಕೊಂಡಿದ್ದಾನೆ. ಹಣಕ್ಕಾಗಿ ಯೂ ಟ್ಯೂಬರ್ ಒಬ್ಬರು ಆತನಿಗೆ ವೋಡ್ಕಾ ಚಾಲೆಂಜ್ ಮಾಡಿದ್ದರು ಎಂದು ತಿಳಿದುಬಂದಿದೆ. ಇದೀಗ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.>


ಇದರಲ್ಲಿ ಇನ್ನಷ್ಟು ಓದಿ :