ಭಾರತೀಯ ಪ್ರಯಾಣಿಕರಿಗೆ ಅಮೆರಿಕಾದಿಂದಲೂ ನಿರ್ಬಂಧ

ನವದೆಹಲಿ| Krishnaveni K| Last Modified ಭಾನುವಾರ, 2 ಮೇ 2021 (09:15 IST)
ನವದೆಹಲಿ: ಭಾರತದಲ್ಲಿ ಕೊರೋನಾ ಮಿತಿ ಮೀರಿರುವ ಹಿನ್ನಲೆಯಲ್ಲಿ ಇಲ್ಲಿಂದ ತೆರಳುವ ಪ್ರಯಾಣಿಕರಿಗೆ ಅಮೆರಿಕಾ ನಿರ್ಬಂಧ ವಿಧಿಸಿದೆ.

 
ಕೇವಲ ವಿದ್ಯಾರ್ಥಿಗಳು, ಪತ್ರಕರ್ತರನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಯಾಣಿಕೆರಿಗೆ ಪ್ರಯಾಣ ನಿಷೇಧಿಸಿದೆ. ಸದ್ಯಕ್ಕೆ ಇತರ ಪ್ರಯಾಣಿಕರು ಅಮೆರಿಕಾಗೆ ತೆರಳಲು ಸಾಧ‍್ಯವಿಲ್ಲ.
 
ಆಸ್ಟ್ರೇಲಿಯಾ ಕೂಡಾ ಭಾರತೀಯ ಪ್ರಯಾಣಿಕರಿಗೆ ಪ್ರಯಾಣ ನಿಷೇಧಿಸಿದೆ. ಜೊತೆಗೆ ಇಲ್ಲಿಂದ ತೆರಳುವ ವಿಮಾನಗಳನ್ನೂ ನಿಷೇಧಿಸಿದೆ.  ಬ್ರಿಟನ್ ಕೂಡಾ ಕೆಲವು ನಿರ್ಬಂಧ ಹೇರಿದೆ. ಹೀಗಾಗಿ ಕೊರೋನಾ ಪೀಡಿತ ಭಾರತಕ್ಕೆ ಈಗ ವಿಶ್ವದ ಇತರ ರಾಷ್ಟ್ರಗಳು ಪ್ರಯಾಣ ನಿರ್ಬಂಧ ವಿಧಿಸುತ್ತಿವೆ.
ಇದರಲ್ಲಿ ಇನ್ನಷ್ಟು ಓದಿ :