ನಮಗೆ ಟೈಮ್ ಇಲ್ಲ, ಇನ್ನೆಲ್ಲಾ ಪಂದ್ಯ ಗೆಲ್ಬೇಕು: ಆರ್ ಸಿಬಿ ಬೌಲಿಂಗ್ ಕೋಚ್ ಆಶಿಷ್ ನೆಹ್ರಾ

ಬೆಂಗಳೂರು| Krishnaveni K| Last Modified ಗುರುವಾರ, 4 ಏಪ್ರಿಲ್ 2019 (09:44 IST)
ಬೆಂಗಳೂರು: ನಾಲ್ಕು ಸೋಲಿನ ಬಳಿಕ ಈಗ ಆರ್ ಸಿಬಿ ಪಾಳಯದಲ್ಲಿ ನಿಜಕ್ಕೂ ಸಂಚಲನ ಮೂಡುತ್ತಿದೆ. ಈಗ ತಮ್ಮ ತಂಡದ ಸಮತೋಲನದ ಬಗ್ಗೆ ಟೀಂ ಮ್ಯಾನೇಜ್ ಮೆಂಟ್ ನಿಜಕ್ಕೂ ತಲೆಕೆಡಿಸಿಕೊಂಡಿದೆ.
 
ಇದುವರೆಗೆ ಆಡಿದ ಒಂದೇ ಪಂದ್ಯದಲ್ಲೂ ಗೆಲ್ಲದ ಆರ್ ಸಿಬಿ ಮೇಲೆ ಈಗ ಟೀಕೆಗಳು ಮಿತಿಮೀರಿವೆ. ಇದರ ಬೆನ್ನಲ್ಲೇ ಇದೀಗ ಬೌಲಿಂಗ್ ಕೋಚ್ ಆಶಿಷ್ ನೆಹ್ರಾ ನಮಗೆ ಈಗ ಸಮಯವಿಲ್ಲ. ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.
 
‘ನಮಗೆ ಈಗ ಸಮಯದ ಅಭಾವವಿದೆ. ಇನ್ನು, ಸಿಕ್ಕ ಸಣ್ಣ ಅವಕಾಶವನ್ನೂ ಹಾಳು ಮಾಡದೇ ಗೆಲ್ಲುವ ಕಡೆಗೆ ಗಮನಹರಿಸಬೇಕಿದೆ. ಇಂತಹ ಟೂರ್ನಮೆಂಟ್ ಗಳಲ್ಲಿ ಕ್ಯಾಚ್ ಬಿಟ್ಟರೆ ಪಂದ್ಯವನ್ನೇ ಕಳೆದುಕೊಂಡಂತೆ. ನಾವು ಇಂತಹ ತಪ್ಪುಗಳನ್ನು ಸರಿಪಡಿಸಬೇಕಿದೆ’ ಎಂದು ನೆಹ್ರಾ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  
ಇದರಲ್ಲಿ ಇನ್ನಷ್ಟು ಓದಿ :