ನಾಯಕತ್ವದ ಮೊದಲ ಮತ್ತು ಕೊನೆಯ ಪಂದ್ಯದಲ್ಲಿ ಕೊಹ್ಲಿ ಸ್ಕೋರ್ ಒಂದೇ!

ದುಬೈ| Krishnaveni K| Last Modified ಮಂಗಳವಾರ, 12 ಅಕ್ಟೋಬರ್ 2021 (09:55 IST)
ದುಬೈ: ರಲ್ಲಿ ಆರ್ ಸಿಬಿ ನಾಯಕರಾಗಿ ನಿನ್ನೆ ಕೊನೆಯ ಪಂದ್ಯವಾಡಿದ ವಿರಾಟ್ ಕೊಹ್ಲಿ ವೈಯಕ್ತಿಕ ರನ್ ಗಳಿಕೆಯಲ್ಲಿ ಅಪರೂಪದ ದಾಖಲೆಯೊಂದನ್ನು ಮಾಡಿದ್ದಾರೆ.
 > 2013 ರಲ್ಲಿ ಮೊದಲ ಬಾರಿಗೆ ಆರ್ ಸಿಬಿ ನಾಯಕರಾದಾಗಿ ಕಣಕ್ಕಿಳಿದಿದ್ದ ಪಂದ್ಯದಲ್ಲಿ ಕೊಹ್ಲಿ ಮಾಡಿದ್ದು 39 ರನ್. ನಿನ್ನೆ ಕೊನೆಯ ಪಂದ್ಯದಲ್ಲೂ ಕೊಹ್ಲಿ 39 ಕ್ಕೇ ಔಟಾಗುವ ಮೂಲಕ ಮೊದಲ ಮತ್ತು ಕೊನೆಯ ಪಂದ್ಯದಲ್ಲಿ ಒಂದೇ ಸ್ಕೋರ್ ಗಳಿಸಿದರು.>   ನಾಯಕರಾಗಿ ಆರ್ ಸಿಬಿಯಲ್ಲಿ 140 ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ 66 ಗೆಲುವು ಮತ್ತು 70 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಇದುವರೆಗೆ ಒಂದೇ ಒಂದು ಕಪ್ ಗೆಲ್ಲಲು ಸಾಧ್ಯವಾಗದೇ ಇರುವುದು ಅವರ ಬಹುದೊಡ್ಡ ಕೊರತೆಯಾಗಿದೆ. ನಾಯಕನಾಗಿ 4871 ರನ್ ಗಳಿಸಿರುವ ಕೊಹ್ಲಿ ಐಪಿಎಲ್ ನಲ್ಲಿ ಗರಿಷ್ಠ ವೈಯಕ್ತಿಕ ರನ್ ಗಳಿಸಿದ ನಾಯಕ ಎಂಬ ದಾಖಲೆ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :