ವಿಶ್ವದ ಮೊದಲ ಶ್ರೀಮಂತ ಸ್ಥಾನದಿಂದ 2ನೇ ಸ್ಥಾನಕ್ಕೆ ಇಳಿದ ಅಮೆಜಾನ್ ಸಂಸ್ಥಾಪಕ

ನ್ಯೂಯಾರ್ಕ್| pavithra| Last Modified ಶನಿವಾರ, 26 ಅಕ್ಟೋಬರ್ 2019 (06:46 IST)
ನ್ಯೂಯಾರ್ಕ್ : 2018ರಲ್ಲಿ ವಿಶ್ವದ ಮೊದಲ ಎಂಬ ಹೆಗ್ಗಳಿಕೆ ಪಡೆದುಕೊಂಡ ಅಮೆಜಾನ್ ಸಂಸ್ಥಾಪಕ ಹಾಗೂ ಸಿಇಒ ಜೆಫ್ ಬೆಜೂಸ್ ಈ ಬಾರಿ 2ನೇ ಸ್ಥಾನಕ್ಕೆ  ಇಳಿದಿದ್ದಾರೆ.
2019 ರಲ್ಲಿ ಅಮೆಜಾನ್ ಕಂಪೆನಿಯ ನಿವ್ವಳ ಲಾಭಾಂಶ ಕಡಿಯಾಗಿರುವ ಹಿನ್ನಲೆಯಲ್ಲಿ ಜೆಫ್ ಬೆಜೂಸ್ ಅವರ ಒಟ್ಟು ಆಸ್ತಿ ಮೌಲ್ಯ 103.9 ಬಿಲಿಯನ್ ಡಾಲರ್ ಆಗಿದ್ದು, ಆದ ಕಾರಣ ಅವರು  ವಿಶ್ವದ ಮೊದಲ ಶ್ರೀಮಂತ ಸ್ಥಾನದಿಂದ 2ನೇ ಸ್ಥಾನಕ್ಕೆ  ಇಳಿದಿದ್ದಾರೆ.

,
24 ವರ್ಷಗಳ ಕಾಲ ವಿಶ್ವದ ಮೊದಲ ಶ್ರೀಮಂತ ವ್ಯಕ್ತಿ ಎನಿಸಿಕೊಂಡ ಮೈಕ್ರೋಸಾಫ್ಟ್  ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಈ ಬಾರಿ 105.7 ಬಿಲಿಯನ್ ಡಾಲರ್  ಆಸ್ತಿಯನ್ನು ಹೊಂದುವುದರ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :