ಕೇರಳ ಜನರ ನೆರವಿಗೆ ನಿಂತ ಟೆಲಿಕಾಂ ಕಂಪನಿಗಳು

ಕೇರಳ| pavithra| Last Modified ಶನಿವಾರ, 18 ಆಗಸ್ಟ್ 2018 (06:56 IST)
: ಕೇರಳದಲ್ಲಿ ಪ್ರವಾಹದಿಂದ ನಿರಾಶ್ರಿತರ ನೆರವಿಗೆ ಅನೇಕ ಗಣ್ಯರು, ಸೆಲೆಬ್ರಿಟಿಗಳು ತಮ್ಮ ಸಹಾತಹಸ್ತವನ್ನು ನೀಡಿದ್ದಾರೆ. ಅದೇರೀತಿ ಇದೀಗ ಟೆಲಿಕಾಂ ಕಂಪನಿಗಳು ಕೂಡ ಕೇರಳ ಜನರ ನೆರವಿಗೆ ನಿಂತಿದೆ.

ಹೌದು ಕೇರಳದಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು, 67ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇಂತಹ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಕೇರಳದ ಜನರ ನೆರವಿಗೆ ಇದೀಗ ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ ಟೆಲಿಕಾಂ ಕಂಪನಿಗಳು ನಿಂತಿವೆ.


ಏರ್ಟೆಲ್ ಕೇರಳದ ಪ್ರೀಪೇಯ್ಡ್ ಗ್ರಾಹಕರಿಗೆ ಉಚಿತ ಡೇಟಾ ಹಾಗೂ 30 ರೂಪಾಯಿ ಮೌಲ್ಯದ ಟಾಕ್ ಟೈಂ ಉಚಿತವಾಗಿ ನೀಡ್ತಿದೆ. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಬಿಲ್ ಪಾವತಿ ದಿನಾಂಕವನ್ನು ವಿಸ್ತರಿಸಿದೆ. ಜೊತೆಗೆ ಏರ್ಟೆಲ್, ತೊಂದರೆಗೊಳಗಾದ ಗ್ರಾಹಕರಿಗೆ ಉಚಿತ ವೈಫೈ ಹಾಗೂ ಕರೆ ಸೌಲಭ್ಯವನ್ನು ನೀಡ್ತಿದೆ. ಏರ್ಟೆಲ್ ಸ್ಟೋರ್ ಗಳಲ್ಲಿ ಬ್ಯಾಟರಿ ಚಾರ್ಜ್ ಗೆ ಅವಕಾಶ ಕೂಡ ಮಾಡಿಕೊಡ್ತಿದೆ.


ಜಿಯೋ ಕೂಡ ಗ್ರಾಹಕರ ನೆರವಿಗೆ ಮುಂದಾಗಿದೆ. ಉಚಿತ ಡೇಟಾ ಹಾಗೂ ಕರೆ ನೀಡುವ ಘೋಷಣೆ ಮಾಡಿದೆ. ಹಾಗೇ ವೊಡಾಫೋನ್ ಕೂಡ ತನ್ನೆಲ್ಲ ಪ್ರೀಪೇಯ್ಡ್ ಗ್ರಾಹಕರಿಗೆ 30 ರೂಪಾಯಿ ಮೌಲ್ಯದ ಟಾಕ್ ಟೈಂ ಉಚಿತವಾಗಿ ನೀಡ್ತಿದೆ. ಇದನ್ನು ಆಯಕ್ಟಿವ್ ಮಾಡಲು ಗ್ರಾಹಕರು CREDIT ಎಂದು ಟೈಪ್ ಮಾಡಿ 144 ನಂಬರ್ ಗೆ ಎಸ್‌ಎಂಎಸ್ ಮಾಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :