Widgets Magazine

ಕೇವಲ 10 ನಿಷಗಳಲ್ಲಿ 2.5 ಲಕ್ಷ ಮಾರಾಟ..!

New Delhi| Rajendra| Last Modified ಬುಧವಾರ, 25 ಜನವರಿ 2017 (11:19 IST)
ಚೀನಾ ಕಂಪೆನಿ ಷಿಯೋಮಿ ಬಿಡುಗಡೆ ಮಾಡಿದ ರೆಡ್ ಮಿ ನೋಟ್ 4 ಸ್ಮಾರ್ಟ್‌ಫೋನ್ ಮೊದಲ ಮಾರಾಟದ ಹತ್ತು ನಿಮಿಷಗಳಲ್ಲಿ 2.5 ಲಕ್ಷ ಫೋನ್‌ಗಳು ಮಾರಾಟವಾಗಿವೆ. ಈ ವಿಷಯವನ್ನು ಸ್ವತಃ ಷಿಯೋಮಿ ಭಾರತ ಪ್ರತಿನಿಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದ ಪ್ರತಿನಿಧಿ ಮನು ಜೈನ್ ಮಾತನಾಡುತ್ತಾ, ಫಸ್ಟ್ ಸೇಲ್‌ನಲ್ಲಿ ನೋಟ್ 4 ಸ್ಮಾರ್ಟ್‌ಫೋನ್ ಖರೀದಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಮತ್ತಷ್ಟು ಉತ್ಪನ್ನಗಳನ್ನು ಭಾರತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಇದರಿಂದ ಸಾಧ್ಯವಾಗಲಿದೆ ಎಂದಿದ್ದಾರೆ.
2017ರ ಆರಂಭದಲ್ಲಿ ಮೊದಲ ಹೆಜ್ಜೆ ಇದು. ವರ್ಷದ ಕೊನೆಗೆ ಇನ್ನಷ್ಟು ಮೈಲಿಗಲ್ಲು ತಲುಪುತ್ತೇವೆಂದಿದ್ದಾರೆ. ರೆಡ್‍ಮಿ ನೋಟ್ 4 ಮೂರು ವೇರಿಯಂಟ್‌ಗಳಲ್ಲಿ ಭಾರತ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 2ಜಿಬಿ ರ‍್ಯಾಮ್/32ಜಿಬಿ ಮೆಮೊರಿ ಬೆಲೆ ರೂ.9,999, 3ಜಿಬಿ/32ಜಿಬಿ ಮೆಮೊರಿ ಬೆಲೆ ರೂ.10,999, 4ಜಿಬಿರ‍್ಯಾಮ್/64ಜಿಬಿ ಮೆಮೊರಿ ಬೆಲ್ರ್ ರೂ.12,999 ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :