ನಟ ಪೊನ್ನಂಬಲಂಗೆ ಸಹಾಯ ಹಸ್ತ ನೀಡಿದ ನಟ ಚಿರಂಜೀವಿ

ಹೈದರಾಬಾದ್| pavithra| Last Modified ಭಾನುವಾರ, 23 ಮೇ 2021 (09:30 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರು ಸದಾ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಮೂತ್ರಪಿಂಡದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ನಟ ಪೊನ್ನಂಬಲಂಗೆ ತಮ್ಮ ಸಹಾಯ ಹಸ್ತ ನೀಡಿದ್ದಾರೆ.
ನಟ ಪೊನ್ನಂಬಲಂ ಅವರ ಸ್ಥಿತಿ ಕೇಳಿ ಆಸ್ಪತ್ರೆಗೆ ಬಂದ ನಟ ಚಿರಂಜೀವಿ ಅವರು ಚಿಕಿತ್ಸೆಗೆಂದು ನಟನಿಗೆ 2 ಲಕ್ಷರೂ ಗಳನ್ನು ನೀಡಿದ್ದಾರೆ. ಈ ವಿಚಾರವನ್ನು ನಟ ಪೊನ್ನಂಬಲಂ ಅವರು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.> > ಚಿತ್ರರಂಗದಲ್ಲಿ ಸ್ಟಂಟ್ ಮ್ಯಾನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟ ಪೊನ್ನಂಬಲಂ ಅವರು ತಮಿಳು ಮತ್ತು ತೆಲುಗು ಚಿತ್ರೋದ್ಯಮದಲ್ಲಿ ಹೆಸರು ಮಾಡಿದ್ದಾರೆ. ಇವರು ಮುಗ್ಗರು ಮೊನಾಗಳ್ಳು, ಘರಾನಾ ಮೊಗುಡು ಸೇರಿದಂತೆ ಇ್ನನಿತರ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :