ಕೊರೊನಾ ಸೋಂಕಿಗೆ ಒಳಗಾದ ನಟ ಅಲ್ಲು ಅರ್ಜುನ್

ಹೈದರಾಬಾದ್| pavithra| Last Modified ಬುಧವಾರ, 28 ಏಪ್ರಿಲ್ 2021 (12:17 IST)
ಹೈದರಾಬಾದ್ : ಕೊರೊನಾ 2ನೇ ಅಲೆ ಎಲ್ಲರನ್ನೂ ಕಾಡುತ್ತಿದ್ದು, ಇದೀಗ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ನಟ ಅಲ್ಲು ಅರ್ಜುನ್ ಅವರು ಕೊರೊನಾ ಟೆಸ್ಟ್ ಗೆ ಒಳಪಟ್ಟಾಗ ಅವರಿಗೆ ಕೊರೊನಾ ಇರುವುದು ವರದಿಯಲ್ಲಿ ದೃಢಪಟ್ಟಿದೆ. ಇದೀಗ ಅವರು ಮನೆಯಲ್ಲಿಯೇ ಐಸೋಲೇಷನ್ ಆಗಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.> > ಹಾಗೇ ಸ್ವತಃ ನಟ ಅಲ್ಲು ಅರ್ಜುನ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.  ಈಗ ತಾವು ಆರೋಗ್ಯವಾಗಿರುವುದಾಗಿ ಮತ್ತು ತಮ್ಮ ಬಗ್ಗೆ ಅಭಿಮಾನಿಗಳು ಚಿಂತಿಸಬಾರದೆಂದು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :