ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಲ್ಲಿ ಹಬ್ಬಕ್ಕೆ ಏರ್ಪಾಟು ರೆಡಿ

ಬೆಂಗಳೂರು| Krishnaveni K| Last Modified ಶನಿವಾರ, 15 ಫೆಬ್ರವರಿ 2020 (10:12 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಳೆ ಜನ್ಮದಿನದ ಸಂಭ್ರಮ. ಇದಕ್ಕಾಗಿ ಆಗಮಿಸುವ ಅಭಿಮಾನಿಗಳಿಗೆ ದರ್ಶನ್ ಕಡೆಯಿಂದ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ.
 

ಈ ಬಾರಿಯೂ ಕಳೆದ ಬಾರಿಯಂತೆ ತಮ್ಮ ಅಭಿಮಾನಿಗಳಿಗೆ ಕೇಕ್ ತರಬೇಡಿ, ಅದರ ಬದಲು ದಿನಸಿ ತನ್ನಿ, ಅಗತ್ಯವಿದ್ದವರಿಗೆ ಹಂಚುವ ಕೆಲಸ ಮಾಡುತ್ತೇವೆ ಎಂದು ದರ್ಶನ್ ಮನವಿ ಮಾಡಿದ್ದರು. ಅದರಂತೆ ಹಲವರು ಈಗಾಗಲೇ ದರ್ಶನ್ ಮನೆಗೆ ದಿನಸಿ ಸಾಮಾನುಗಳನ್ನು ತಂದು ಕೊಟ್ಟಿದ್ದಾರೆ.
 
ತಮಗೆ ವರ್ಷ ಪೂರ್ತಿ ಊಟ ಹಾಕುವ ಅಭಿಮಾನಿಗಳಿಗೆ ನಾನು ಒಂದು ದಿನ ಊಟ ಹಾಕೋದು ದೊಡ್ಡ ವಿಷಯವಲ್ಲ ಎಂದು ದರ್ಶನ್ ಹಿಂದೆಯೇ ಹೇಳಿದ್ದರು. ಅದರಂತೆ ಈ ಬಾರಿಯೂ ತಮ್ಮ ಬರ್ತ್ ಡೇಗೆ ಶುಭ ಕೋರಲು ಮನೆಗೆ ಬರುವ ಅಭಿಮಾನಿಗಳಿಗೆ ಊಟ ಹಾಕಿಸಲು ಸಿದ್ಧತೆ ನಡೆದಿದೆ. ಪೆಂಡಾಲ್ ಹಾಕಲಾಗಿದ್ದು, ಸಾವಿರಾರು ಜನರ ಊಟಕ್ಕೆ ಸಿದ್ಧತೆ ಮಾಡಲಾಗಿದೆ. ಇಂದು ಮಧ‍್ಯರಾತ್ರಿ ದರ್ಶನ್ ಬರ್ತ್ ಡೇ ನಿಮಿತ್ತ ರಾಬರ್ಟ್ ಸಿನಿಮಾ ಟೀಸರ್ ಕೂಡಾ ಬಿಡುಗಡೆಯಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :