ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ದೂರು ನೀಡಿದ ನಿರ್ಮಾಪಕ

ಚೆನ್ನೈ| Krishnaveni K| Last Modified ಶುಕ್ರವಾರ, 27 ಸೆಪ್ಟಂಬರ್ 2019 (08:57 IST)
ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ವಿರುದ್ಧ 10 ಕೋಟಿ ರೂ. ಹಣ ಮರಳಿ ನೀಡಲಿಲ್ಲ ಎಂಬ ಆರೋಪದಲ್ಲಿ ನಿರ್ಮಾಪಕ ಕೆಇ ಜ್ಞಾನವೇಲ್ ರಾಜ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ.
 

ಕಮಲ್ ಹಾಸನ್ ತಮ್ಮ ಉತ್ತಮ ವಿಲನ್ ಸಿನಿಮಾ ಸಮಯದಲ್ಲಿ ತಮ್ಮಿಂದ ಹಣ ಪಡೆದಿದ್ದರು. ಆದರೆ ಅದನ್ನು ಇದುವರೆಗೆ ಮರಳಿಸಿಲ್ಲ. ಹಣದ ಬದಲಿಗೆ ತಮ್ಮೊಂದಿಗೆ ಒಂದು ಸಿನಿಮಾದಲ್ಲಿ ನಟಿಸುವುದಾಗಿ ಕಮಲ್ ಹೇಳಿದ್ದರು. ಅದನ್ನೂ ಇದುವರೆಗೆ ಮಾಡಿಲ್ಲ.
 
ಹೀಗಾಗಿ ಬೇರೆ ದಾರಿ ಕಾಣದೇ ನಿರ್ಮಾಪಕರ ಸಂಘಕ್ಕೆ ದೂರು ನೀಡಿರುವುದಾಗಿ ಜ್ಞಾನವೇಲ್ ಹೇಳಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ನಿರ್ಮಾಪಕರ ಸಂಘ ವಿಚಾರಣೆ ನಡಸಲಿದೆ.
ಇದರಲ್ಲಿ ಇನ್ನಷ್ಟು ಓದಿ :