ಡಿ ಬಾಸ್ ದರ್ಶನ್ ‘ಮದಕರಿನಾಯಕ’ ಸಿನಿಮಾಗೆ ಇಷ್ಟೊಂದು ಖರ್ಚಾಗಲಿದೆಯಂತೆ!

ಬೆಂಗಳೂರು| Krishnaveni K| Last Modified ಮಂಗಳವಾರ, 19 ನವೆಂಬರ್ 2019 (09:16 IST)
ಬೆಂಗಳೂರು: ಒಡೆಯ, ರಾಬರ್ಟ್ ಸಿನಿಮಾಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ಸೆಟ್ಟೇರಲಿದೆ. ಇದು ಮತ್ತೊಂದು ಐತಿಹಾಸಿಕ ಸಿನಿಮಾವಾಗಲಿದೆ.

 
ಈಗಾಗಲೇ ಸಂಗೊಳ್ಳಿ ರಾಯಣ್ಣದಲ್ಲಿ ದರ್ಶನ್ ಐತಿಹಾಸಿಕ ಪಾತ್ರ ಮಾಡಿದ್ದರು. ಅದಾದ ಬಳಿಕ ಕುರುಕ್ಷೇತ್ರದಲ್ಲಿ ಪೌರಾಣಿಕ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು. ಇದೀಗ ಮತ್ತೆ ದರ್ಶನ್ ಮದಕರಿನಾಯಕ ಎನ್ನುವ ಅದ್ಧೂರಿ ಸಿನಿಮಾದಲ್ಲಿ ಅಭಿನಯಸಲಿದ್ದು ರಾಕ್ ಲೈನ್ ವೆಂಕಟೇಶ್ ಈ ಸಿನಿಮಾದ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಬಂದಿತ್ತು.
 
ಈ ಸಿನಿಮಾ ದರ್ಶನ್ ಚಿತ್ರಜೀವನದಲ್ಲಿ ಮೈಲಿಗಲ್ಲಾಗಲಿದೆ. ಈ ಸಿನಿಮಾದ ಬಜೆಟ್ 100 ಕೋಟಿಯಾಗಲಿದೆ ಎಂಬ ಸುದ್ದಿ ಬಂದಿದೆ. ಐತಿಹಾಸಿಕ ಚಿತ್ರವೆಂದ ಮೇಲೆ ಅದಕ್ಕೆ ತಕ್ಕಂತೆ ಖರ್ಚು ವೆಚ್ಚಗಳಿದ್ದೇ ಇರುತ್ತದೆ. ಇದಕ್ಕೆ ಮೊದಲು ಬಿಡುಗಡೆಯಾಗಲಿರುವ ರಾಬರ್ಟ್ ಕೂಡಾ ಅದ್ಧೂರಿ ವೆಚ್ಚದ್ದು ಎನ್ನಲಾಗಿದೆ. ಹೀಗಾಗಿ ದರ್ಶನ್ ಸಾಲು ಸಾಲಾಗಿ ಅದ್ಧೂರಿ ನಿರ್ಮಾಣದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :