ಶೂಟಿಂಗ್ ಸ್ಪಾಟ್ ನಲ್ಲಿ ಜಗ್ಗೇಶ್ ಗೆ ದರ್ಶನ್ ಅಭಿಮಾನಿಗಳ ಮುತ್ತಿಗೆ

ಬೆಂಗಳೂರು| Krishnaveni K| Last Modified ಮಂಗಳವಾರ, 23 ಫೆಬ್ರವರಿ 2021 (09:08 IST)
ಬೆಂಗಳೂರು: ದರ್ಶನ್ ಅಭಿಮಾನಿಗಳ ಬಗ್ಗೆ ಕೆಲವು ದಿನಗಳ ಹಿಂದೆ ನವರಸನಾಯಕ ಜಗ್ಗೇಶ್ ಹೇಳಿದ್ದಾರೆಂಬ ಅಡಿಯೋ ಟೇಪ್ ವೈರಲ್ ಆಗಿತ್ತು. ಇದೀಗ ಅದೇ ವಿಚಾರಕ್ಕೆ ದರ್ಶನ್ ಅಭಿಮಾನಿಗಳು ಜಗ್ಗೇಶ್ ಗೆ ಮುತ್ತಿಗೆ ಹಾಕಿದ್ದಾರೆ.

 
ಮೈಸೂರಿನ ಬನ್ನೂರಿನ ಹತ್ತಿಹಾಳದಲ್ಲಿ ತೋತಾಪುರಿ ಸಿನಿಮಾ ಶೂಟಿಂಗ್ ಗೆ ತೆರಳಿದ ಜಗ್ಗೇಶ್ ಗೆ ಮುತ್ತಿಗೆ ಹಾಕಿದ ದರ್ಶನ್ ಅಭಿಮಾನಿಗಳು ಹೇಳಿಕೆ ಕೊಟ್ಟಿದ್ದನ್ನು ಪ್ರಶ್ನಿಸಿದ್ದಲ್ಲದೆ, ಕ್ಷಮೆಗೆ ಆಗ್ರಹಿಸಿದ್ದಾರೆ. ಈ ವೇಳೆ ನಾನು ಆ ರೀತಿ ಹೇಳಿಲ್ಲ. ಯಾರೋ ಬೇಕೆಂದೇ ನಮ್ಮ ಮಧ‍್ಯೆ ತಂದಿಟ್ಟಿದ್ದಾರೆ ಎಂದು ಜಗ್ಗೇಶ್ ಸಮಜಾಯಿಷಿ ನೀಡಲು ಯತ್ನಿಸಿದರೂ ಅಭಿಮಾನಿಗಳು ಸುಮ್ಮನಾಗಲಿಲ್ಲ. ಬಳಿಕ ಜಗ್ಗೇಶ್ ಕ್ಷಮೆ ಯಾಚಿಸಿದ್ದಾರೆ. ಈ ವೇಳೆ ಜಗ್ಗೇಶ್, ದರ್ಶನ್ ಗೆ ಕರೆ ಮಾಡಲೂ ಯತ್ನಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :