ಪ್ರಭಾಸ್ ಸಿನಿಮಾದಲ್ಲಿ ನಟಿಸಲು ನಿರ್ಮಾಪಕರು ನೀಡಿದ ಅಡ್ವಾನ್ಸ್ ವಾಪಾಸು ಮಾಡಿದ ದೀಪಿಕಾ

ಹೈದರಾಬಾದ್| pavithra| Last Modified ಶನಿವಾರ, 5 ಸೆಪ್ಟಂಬರ್ 2020 (10:08 IST)
ಹೈದರಾಬಾದ್ : ಪ್ರಭಾಸ್ ಅವರ 21ನೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಿರ್ಮಾಪಕರು ನೀಡಿದ ಮುಂಗಡ ಸಂಭಾವನೆಯನ್ನ ಹಿಂದಿರುಗಿಸಿದ್ದಾರಂತೆ.

ಹೌದು,  ಪ್ರಭಾಸ್ ಅವರ 21ನೇ ಸಿನಿಮಾವನ್ನು ಅಶ್ವಿನ್ ದತ್ ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದಕಾರಣ ನಿರ್ಮಾಪಕ ಅಶ್ವಿನ್ ದತ್ ಅವರು  ನಟಿ ದೀಪಿಕಾರನ್ನು ಭೇಟಿ ಮಾಡಿ ಅಡ್ವಾನ್ಸ್ ನೀಡಿದ್ದಾರೆ. ಆದರೆ ಅದನ್ನು ದೀಪಿಕಾ ಹಿಂದಿರುಗಿಸಿದ್ದಾರಂತೆ.

ಅಂದಮಾತ್ರಕ್ಕೆ ಅವರು ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಅಭಿಮಾನಿಗಳಿ ಬೇಸರ ಪಡುವ ಅಗತ್ಯವಿಲ್ಲ.  ಲಾಕ್ ಡೌನ್ ನಿಂದಾಗಿ ನಿರ್ಮಾಪಕರ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವಾಗ ಹಣ ಪಡೆಯುವುದು ಸರಿಯಲ್ಲ ಎಂಬುವುದು ದೀಪಿಕಾ  ನಿರ್ಧಾರವಾಗಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :