ಯುವರತ್ನ ಹಾಡಿನ ಬಿಡುಗಡೆಗೆ ಇರುವ ಅಡ್ಡಿಯೇನೆಂದು ತಿಳಿಸಿದ ನಿರ್ದೇಶಕ ಸಂತೋಷ್

ಬೆಂಗಳೂರು| Krishnaveni K| Last Modified ಭಾನುವಾರ, 18 ಅಕ್ಟೋಬರ್ 2020 (09:17 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಈಗಾಗಲೇ ಚಿತ್ರೀಕರಣ ಮುಕ್ತಾಯಗೊಳಿಸಿದ್ದು, ಅಭಿಮಾನಿಗಳು ಬಿಡುಗಡೆ ಯಾವಾಗ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೆ ಪ್ರಶ್ನೆ ಮಾಡುತ್ತಲೇ ಇರುತ್ತಾರೆ.
 

ಸಿನಿಮಾ ಇಲ್ಲದೇ ಹೋದರೂ ಕನಿಷ್ಠ ಪಕ್ಷ ರಾಜ್ಯೋತ್ಸವಕ್ಕೆ ಹಾಡುಗಳನ್ನಾದರೂ ರಿಲೀಸ್ ಮಾಡಿ ಎಂದು ದಂಬಾಲು ಬೀಳುತ್ತಿದ್ದಾರೆ. ಇವರಿಗೆ ತಮ್ಮ ಕಷ್ಟವೇನೆಂದು ಸಂತೋಷ್‍ ಆನಂದ್ ರಾಮ್ ವಿವರಿಸಿದ್ದಾರೆ. ‘ಸಿನಿಮಾ ಬಿಡುಗಡೆ ದಿನಾಂಕ ಪಕ್ಕಾ ಆಗದೇ ನಾವು ಹಾಡಿನ ಬಿಡುಗಡೆ ಮಾಡುವ ದಿನಾಂಕ ಘೋಷಿಸಲಾಗದು. ಈಗಷ್ಟೇ ಚಿತ್ರಮಂದಿರ ತೆರೆದಿದೆ. ನಾವು ಪ್ಲ್ಯಾನ್ ಮಾಡುತ್ತಿದ್ದೇವೆ. ಇದು ದೊಡ್ಡ ಸಿನಿಮಾ. ಹಾಗಾಗಿ ಸರಿಯಾಗಿ ಯೋಜನೆ ಹಾಕಿ ಬಿಡುಗಡೆ ಮಾಡಬೇಕು. ನಾವು ನಿಮಗೆ ನಿರಾಸೆ ಮಾಡಲ್ಲ’ ಎಂದು ಸಂತೋಷ್ ಆನಂದ್ ರಾಮ್ ಸಮಜಾಯಿಷಿ ಕೊಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :