ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಸಿನಿಮಾಗೆ ನೀವೇ ಟೈಟಲ್ ಕೊಡಿ

ಬೆಂಗಳೂರು| Krishnaveni K| Last Modified ಗುರುವಾರ, 15 ಅಕ್ಟೋಬರ್ 2020 (11:32 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಎನ್.ಎಸ್ ರಾಜಕುಮಾರ್ ನಿರ್ಮಾಣದ ಹೊಸ ಸಿನಿಮಾಗೆ ಟೈಟಲ್ ನ್ನು ಪ್ರೇಕ್ಷಕರೇ ಇಡಬಹುದು! ಹೀಗೊಂದು ಅವಕಾಶವನ್ನು ನಿರ್ಮಾಪಕರು ಅಭಿಮಾನಿಗಳಿಗೆ ನೀಡಿದ್ದಾರೆ.

 

ಜಟ್ಟ, ಮೈತ್ರಿ, ಮೈನಾದಂತಹ ಹಿಟ್ ಸಿನಿಮಾಗಳನ್ನು ನೀಡಿರುವ ಓಂಕಾರ್ ಮೂವೀಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ನಾಮಕರಣ ಮಾಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗುತ್ತಿದೆ. ನಿಮಗೆ ಇಷ್ಟವಾದ ಟೈಟಲ್ ನ್ನು 8867105511 ಗೆ ಕಳುಹಿಸಬಹುದು. ಅಭಿಮಾನಿಗಳು ಕಳುಹಿಸುವ ಸೂಕ್ತ ಟೈಟಲ್ ನ್ನೇ ಚಿತ್ರಕ್ಕೆ ಇಡಲಾಗುವುದು ಎಂದು ನಿರ್ಮಾಪಕರು ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :